Thu. Jun 19th, 2025

FASTag: ವಾಹನ ಸವಾರರಿಗೆ ಗುಡ್ ನ್ಯೂಸ್, ಆಗಸ್ಟ್ 15ರಿಂದ ಫಾಸ್ಟ್ ಟ್ಯಾಗ್ ಹೊಸ ನಿಯಮ

FASTag: ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತದೆ. ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಪಡೆದು ಒಂದು ವರ್ಷಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: 🟣ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

ಯಾವಾಗಿಂದ ಪಾಸ್ ವಿತರಣೆ..?

  • ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ವಿತರಣೆ
  • 3 ಸಾವಿರ ರೂ.ಗೆ ಟೋಲ್ ಪಾಸ್.. ಒಂದು ವರ್ಷ ಸಂಚಾರ
  • ಒಂದು ವರ್ಷ ಅಥವಾ 200 ಟ್ರಿಪ್ ಸಂಚಾರಕ್ಕೆ ಅವಕಾಶ
  • ಕಾರು, ಜೀಪ್, ವ್ಯಾನ್ ಗಳಿಗೆ ವಾರ್ಷಿಕ ಟೋಲ್ ಪಾಸ್
  • ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರ ವಾರ್ಷಿಕ ಪಾಸ್

ಕೇಂದ್ರ ಸಾರಿಗೆ ಇಲಾಖೆಯು ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರವೇ ವಾರ್ಷಿಕ ಟೋಲ್ ಪಾಸ್ ನೀಡಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕಾರು, ಜೀಪ್, ವ್ಯಾನ್​ಗಳಿಗೆ ಟೋಲ್ ಪಾಸ್ ನೀಡಲಿದೆ.

Leave a Reply

Your email address will not be published. Required fields are marked *