Fri. Jun 20th, 2025

Brahmavara: ಕತ್ತಿಯಿಂದ ಕಡಿದು ಪತ್ನಿಯ ಕೊಲೆ ಮಾಡಿದ ಪತಿ – ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ..!

ಬ್ರಹ್ಮಾವರ: (ಜೂ.20) ಕತ್ತಿಯಿಂದ ಕಡಿದು ಪತ್ನಿಯನ್ನು ಕಡಿದು ಕೊಂದ ಘಟನೆ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಜೂ.19ರ ಗುರುವಾರ ರಾತ್ರಿ ನಡೆದಿದೆ.

ಇದನ್ನೂ ಓದಿ: 🔺ಉಜಿರೆ: ಉಜಿರೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜೀವನ ಕೌಶಲ್ಯ ತರಬೇತಿ

ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ಪತಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ರೇಖಾ ಕೊಲೆಯಾದಕೆ. ಪತಿ ಗಣೇಶ್ ಪೂಜಾರಿ ಕೊಲೆ ಮಾಡಿದ ಆರೋಪಿ.
ಜೂ.19ರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ.

ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನ ಚಟವುಳ್ಳವನಾಗಿದ್ದ. ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಮದ್ಯ ಸೇವನೆ ಮಾಡಿ ಗುರುವಾರ ರಾತ್ರಿ ಮನೆಯಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.


ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *