Fri. Nov 28th, 2025

Eco Club: ಸ್ಟಾರ್ ಲೈನ್ ಶಾಲೆಯಲ್ಲಿ ಇಕೋ ಕ್ಲಬ್ ಉದ್ಘಾಟನೆ

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಶೈಕ್ಷಣಿಕ ಇಲಾಖೆಯ ಮಾರ್ಗದರ್ಶನದಂತೆ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಕೋ ಕ್ಲಬ್ ಉದ್ಘಾಟನೆ ಮಾಡಲಾಯಿತು.

ಇದನ್ನೂ ಓದಿ: 🧘🏻ಉಜಿರೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸಂಘದ ಅಧ್ಯಕ್ಷರಾದ ವಿದ್ಯಾರ್ಥಿ ಮಹಮ್ಮದ್ ಝಿಶಾನ್ ಇವರಿಗೆ ಗಿಡವನ್ನು ನೀಡುವುದರ ಮೂಲಕ ಕ್ಲಬ್ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಹಾಗೂ ಪ್ರಗತಿಪರ ಕೃಷಿಕರೂ ಆಗಿರುವ ಪ್ರಭಾಕರ ಮಯ್ಯ ಮಕ್ಕಳು ಬಾಲ್ಯದಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಜೊತೆಗೆ ಪರಿಸರವನ್ನು ಪ್ರೀತಿಸಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರಾದ ಶ್ರೀಯುತ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಅಯ್ಯುಬ್, ಕೋಶಾಧಿಕಾರಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು. ಅತಿಥಿಗಳು ಸಂಘದ ಸದಸ್ಯರಿಗೆ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಿದರು.

Leave a Reply

Your email address will not be published. Required fields are marked *