Wed. Jun 25th, 2025

ಬೆಳ್ತಂಗಡಿ:(ಜೂ.25) ಕೊಯ್ಯೂರು ಮಲೆಬೆಟ್ಟು ನಿವಾಸಿ ರಝೀನ(24ವ) ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: 🔴ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025 ನಲ್ಲಿ ದಸ್ಕತ್ ಸಿನಿಮಾಗೆ ಉತ್ತಮ ಚಲನಚಿತ್ರ ಪ್ರಶಸ್ತಿ


ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನರ 2ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದರು.
ಬಳಿಕ ಕೊಯ್ಯೂರಿನ ತಾಯಿ ಮನೆಯಲ್ಲಿದ್ದ ರಝೀನ 22-06-2025ರಂದು ಸಂಜೆ 4.00ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ.

ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದರಿಂದಾಗಿ ರಝೀನ ಕಾಣೆಯಾಗಿದ್ದಾರೆಂದು ಪೊಲೀಸ್ ಪ್ರಕಟಣೆ ಹೊರಡಿಸಿದ್ದು ಇವರ ಚಹರೆ ಗುರುತು ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.
ಇವರು ಕಂಡು ಬಂದಲ್ಲಿ 08256-232093, ಬೆಳ್ತಂಗಡಿ ಪೊಲೀಸ್ ಠಾಣೆ 9480805370, ಪಿಎಸ್‌ಐ ಬೆಳ್ತಂಗಡಿ ಪೊಲೀಸ್ ಠಾಣೆ-8277986367, ಕಂಟ್ರೋಲ್ ರೂಂ ದ.ಕ.ಜಿಲ್ಲೆ 9480805300 ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *