Thu. Jun 26th, 2025

Sullia: ಕೆ.ಎಸ್.ಆರ್.ಟಿ.ಸಿ ಬಸ್‌ ಗಳ ನಡುವೆ ಡಿಕ್ಕಿ – ಮಹಿಳೆ ಮೃತ್ಯು

ಸುಳ್ಯ : (ಜೂ.26)ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಆರಂತೋಡು ಗ್ರಾಮದ ಕೋಡಂಕೇರಿ ಎಂಬಲ್ಲಿ, ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ KA 21 F 0069 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಗೆ,

ಇದನ್ನೂ ಓದಿ: ⭕ಪುತ್ತೂರು: ಹೈಸ್ಕೂಲ್ ನಿಂದಲೇ ಪ್ರೀತಿ , ಪ್ರೇಮ

ಮಡಿಕೇರಿ ಕಡೆಯಿಂದ – ಸುಳ್ಯ ಮಾರ್ಗವಾಗಿ ಬರುತ್ತಿದ್ದ KA 19 F 3620 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ಅಪಘಾತವಾಗಿರುತ್ತದೆ

ಅಪಘಾತದಲ್ಲಿ ಮಡಿಕೇರಿ ಕುಶಾಲನಗರ ಮೂಲದ ಭಾರತಿ (50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, 02 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುತ್ತದೆ. ಪ್ರಯಾಣಿಕರ ಪೈಕಿ 17 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿರುತ್ತದೆ.
ಘಟನಾ ಸ್ಥಳಕ್ಕೆ ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಭೇಟಿ ನೀಡಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *