Sun. Jan 11th, 2026

Manjeshwar: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ – ಆರೋಪಿ ಮಗ ಬೈಂದೂರಿನಲ್ಲಿ ಬಂಧನ

ಉಡುಪಿ:(ಜೂ.27) ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದ ತಾಯಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಗನನ್ನು ಬೈಂದೂರು ಪೊಲೀಸರು ಬೈಂದೂರಿನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ⭕ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ, ಬರ್ಬರ ಹತ್ಯೆ

ಮಂಜೇಶ್ವರ ನಲ್ಲಂಗಿಪಾದವು ನಿವಾಸಿ ಮಾಂಟೆರೋ ಮೆಲ್ವಿನ್(38) ಬಂಧಿತ ಆರೋಪಿ. ಈತ ಇಂದು ತನ್ನ ತಾಯಿ ಹಿಲ್ಡಾ ಮೊಂತೆರೊ ಅವರನ್ನು ಕೊಲೆಗೈದು ಸುಟ್ಟು ಹಾಕಿ ರಿಕ್ಷಾದಲ್ಲಿ ಪರಾರಿಯಾಗಿದ್ದನು. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಕುರಿತು ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಬೈಂದೂರ್ ಠಾಣಾ ವ್ಯಾಪ್ತಿಯ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿ ಆರೋಪಿಯನ್ನು ಬಂಧಿಸಿ, ಮಂಜೇಶ್ವರ ಪೊಲೀಸ್ ಸ್ಟೇಶನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬೈಂದೂರು ಎಸ್ಸೈ ತಿಮ್ಮೇಶ್ ಬಿ.ಎನ್., ಕೊಲ್ಲೂರು ಎಸ್ಸೈ ವಿನಯ್ ಕೆ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ ಕೊಲ್ಲೂರು ಠಾಣೆಯ ಪರಯ್ಯ ಮಠಪತಿ. ಮಾಳಪ್ಪ ದೇಸಾಯಿ, ಚಿದಾನಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *