Sat. Jun 28th, 2025

Ujire: ಅನುಗ್ರಹ ಶಾಲಾ ಪಾಲಕ ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ

ಉಜಿರೆ:(ಜೂ.28) ಅನುಗ್ರಹ ಶಿಕ್ಷಣ ಸಂಸ್ಥೆಯ ಪಾಲಕ ಪೋಷಕರ ಸಭೆಯು ಶಾಲಾ ಸಂಚಾಲಕರಾದ ವಂ! ಫಾ! ಅಬೆಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು. ಶಾಲಾ ಮಕ್ಕಳು ಸ್ವಾಗತ ನೃತ್ಯ ಮಾಡಿದರು. ಶಾಲಾ ಸಂಚಾಲಕರು ವೇದಿಕೆಯಲ್ಲಿರುವ ಅತಿಥಿಗಳ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ವಾರ್ಷಿಕ ವರದಿಯನ್ನು ಸಹ ಶಿಕ್ಷಕ ರವಿಕುಮಾರ್ ಇವರು ಮಂಡಿಸಿದರು.

ಇದನ್ನೂ ಓದಿ: ⭕Swetcha votarkar: ಖ್ಯಾತ ನಿರೂಪಕಿ ಆತ್ಮಹತ್ಯೆ.!

ಶಾಲೆಯ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೊ ಅವರು ಪ್ರಾಥಮಿಕವಾಗಿ ಮಾತನಾಡಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ರ‍್ವರ ಸಹಕಾರ ಕೋರಿದರು. ತದನಂತರ ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ! ಫಾ! ಆಂಟೆನಿ ಪ್ರಕಾಶ್ ಮೊಂತೆರೊ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಯ ಬೌದ್ಧಿಕ ಮಾನಸಿಕ ಆಧ್ಯಾತ್ಮಿಕ ಬೆಳವಣಿಗೆಗೆ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು, ಪೋಷಕರಿಗೆ ಶಿಸ್ತು ಸಂಯಮಗಳಿರಬೇಕು ಆಗ ಮಕ್ಕಳು ಸಮಾಜದ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು. ಶಿಕ್ಷಕ ರಕ್ಷಕ ಸಂಘದ ಹಾಲಿ ಉಪಾಧ್ಯಕ್ಷರಾಧ ಶ್ರೀ ಉಮೇಶ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಶಾಲಾ ಸಂಚಾಲಕರು ಮಾತನಾಡಿ ಎಲ್ಲರಿಗೂ ಶುಭವನ್ನು ಕೋರಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸ್ಟಾನಿ ಪಿಂಟೋ , ಶ್ರೀ ರೋಶನ್ ಡಿಸೋಜ, ಶ್ರೀ ಶಿನು, ಶ್ರೀ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಗಣೇಶ್ ಇವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ವಸಂತ ಹೆಗ್ಡೆ ಇವರು ಸ್ವಾಗತಿಸಿ ಶ್ರೀಮತಿ ಐರಿನ್ ರೊಡ್ರಿಗಸ್ ಇವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *