Tue. Jul 1st, 2025

Bengaluru: ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ – ಆಮೇಲೆ ಆಗಿದ್ದೇನು ಗೊತ್ತಾ..?

ಬೆಂಗಳೂರು, (ಜು.1): ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! ಇಂಥದ್ದೊಂದು ವಿಲಕ್ಷಣ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ಪುತ್ತೂರಿನಲ್ಲಿ ಯುವತಿಗೆ ವಂಚನೆ ಪ್ರಕರಣ – ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ

ರಾಜಕಾರಣಿಗಳ ಜತೆ ಹಾಗೂ ಸಹಚರ ಒಟ್ಟಿಗೆ ಮಲಗುವಂತೆ ಒತ್ತಾಯಿಸುತ್ತಿದ್ದುದಲ್ಲದೆ, 6 ಬಾರಿ ತಲಾಖ್ ನೀಡಿದ ಮತ್ತು ಅಬಾರ್ಷನ್ ಮಾಡಿಸಿದ ಆರೋಪದಲ್ಲಿ ಪತಿಯ ವಿರುದ್ಧವೇ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಅತ್ತೆ-ಮಾವನ ವಿರುದ್ಧವೂ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸದ್ಯ ಬನಶಂಕರಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ರಾಜಕಾರಣಿಗಳ ಜೊತೆ ಮಲಗೆಂದು ಒತ್ತಾಯ:
ಸಂತ್ರಸ್ತೆಯು 25-6-2021 ರಂದು ಆರೋಪಿ ಯೂನಸ್ ಪಾಷಾನನ್ನು ವಿವಾಹವಾಗಿದ್ದರು. ಇದಾದ ಸುಮಾರು 4 ತಿಂಗಳ ನಂತರ ಆರೋಪಿಗಳಾದ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ತಾಯಿ ಪಹೀನ್ ತಾಜ್ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆಯು ಗರ್ಭವತಿಯಾಗಿದ್ದು, ಯೂನಸ್ ಪಾಷಾ ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ್ದ. 17-12-2021 ರಂದು ಸಂತ್ರಸ್ತೆಯನ್ನು ಹೆದರಿಸಿ ಮತ್ತು ಒತ್ತಾಯಪಡಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ನಡವಳಿಕೆಗಳನ್ನು ಪ್ರಶ್ನಿಸಿದರೆ ಯೂನಸ್ ಪಾಷಾ ಆಯುಧಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದ. ಪತ್ನಿಯ ತಲೆಗೆ ಗನ್ ಇಟ್ಟು ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ತಂದೆ ಮತ್ತು ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಬರುತ್ತಿದ್ದ. 2023 ರಲ್ಲಿ ಸಂತ್ರಸ್ತೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಎಂದು ಎಫ್​ಐಆರ್​​ನಲ್ಲಿ ತಿಳಿಸಲಾಗಿದೆ.

ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು: ಪತ್ನಿಯ ಮಾರಾಟಕ್ಕೆ ಮುಂದಾಗಿದ್ದ ಪಾಷಾ!
ಯೂನಸ್ ಪಾಷಾಗೆ ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು ಇದೆ. ಆರೋಪಿಯು ಸಂತ್ರಸ್ತೆಯನ್ನು ಆತನ ರಾಜಕಾರಣಿ ಸ್ನೇಹಿತನಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಕೆಲವು ತಿಂಗಳ ಹಿಂದೆ ತಿಳಿದು ಬಂದಿದೆ. ಇದರಿಂದ ಭಯಗೊಂಡ ಸಂತ್ರಸ್ತೆಯು ಕಳೆದ ಎರಡು ತಿಂಗಳುಗಳಿಂದ ಗಂಡನ ಮನೆ ಬಿಟ್ಟು ಬಂದು ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಎಫ್​ಐಆರ್​​​ನಲ್ಲಿ ಉಲ್ಲೇಖವಾಗಿದೆ.

2025 ರ ಜೂನ್ 4 ರಂದು ಸಂತ್ರಸ್ತೆಯು ಬಟ್ಟೆಗಳನ್ನು ವಾಪಸ್ ತರಲು ಪತಿಯ ಮನೆಗೆ ಹೋಗಿದ್ದಾಗ ಪಾಷಾ ಕೊಲೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆಗೆ ಮಾತ್ರವಲ್ಲದೆ ಆಕೆಯ ತಾಯಿಗೂ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಸಂತ್ರಸ್ತೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿ ದೂರು ನೀಡಿದ್ದಾರೆ ಎಂದು ಬನಶಂಕರಿ ಠಾಣೆಯಲ್ಲಿ ದಾಖಲಾದ ಎಫ್​ಐಆರ್​​ನಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *