ಬೆಳ್ತಂಗಡಿ: (ಜು.2)ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು ಬೃಹತ್ ಕಾರ್ಮಿಕ ಜಾಗೃತಿ ಆಂದೋಲನವನ್ನು ಆಯೋಜಿಸುವ ಕುರಿತು ಸಮಾಲೋಚನಾ ಸಭೆಯನ್ನು ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ಜರುಗಿತು.

ಇದನ್ನೂ ಓದಿ: 🟢ಬೆಳ್ತಂಗಡಿ: ಮನ್‌ಶರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ರೀತಿಯಲ್ಲಿ “ಡಾಕ್ಟರ್ಸ್ ಡೇ” ಆಚರಣೆ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ತಾಲೂಕು ಸಮಿತಿ ಅಧ್ಯಕ್ಷರಾದ ವಕೀಲರಾದ ಉದಯ್ ಬಿ.ಕೆ ಅವರು ವಹಿಸಿದ್ದರು ಈ ಸಂದರ್ಭದಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ ಜಿಲ್ಲಾಡಳಿತ ಮತ್ತು ನೂತನವಾಗಿ ಬಂದಿರುವಂತಹ ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಕೆಂಪು ಕಲ್ಲು ಮರಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ ಇದರಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಬಳಲುವಂತಾಗಿದೆ.
ಈ ದೃಷ್ಟಿಯಲ್ಲಿ ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ತಹಶೀಲ್ದಾರರು ಪೊಲೀಸ್ ನಿರೀಕ್ಷಕರಿಗೆ ಮನವಿ ಮಾಡುವುದು ಈ ಮನವಿಗೆ ಒಂದು ವಾರದ ಒಳಗೆ ಸ್ಪಂದಿಸದಿದ್ದರೆ ಬೃಹತ್ ಜನೊಂದೋಲನ ಸಭೆಯನ್ನು ನಡೆಸುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಬೆವರಿನ ಶ್ರಮದ ದಿಂದ ನಿರ್ಮಾಣವಾಗಿರುವ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯು ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕರಿಗೆ ಭಾರಿ ರೀತಿಯ ತೊಂದರೆಗಳನ್ನು ಉಂಟು ಮಾಡುತ್ತಿದ್ದಾರೆ.

ಈ ಕಟ್ಟಡ ಮಂಡಳಿಯ ಹಣವನ್ನು ಕಾರ್ಮಿಕರಿಗೆ ಅಗತ್ಯ ಇಲ್ಲದ ಯೋಜನೆಗಳನ್ನು ತಂದು ಕಾರ್ಮಿಕರ ಬೆವರಿನ ಶ್ರಮದ ಹಣವನ್ನು ಪೋಲು ಮಾಡುತ್ತಿದ್ದಾರೆ ನಾಲ್ಕು ವರ್ಷಗಳಿಂದ ಕಾರ್ಮಿಕರಿಗೆ ಸರಿಯಾಗಿ ಸ್ಕಾಲರ್ಶಿಪುಗಳು ಬರುತ್ತಿಲ್ಲ ವೃದ್ಧಾಪ್ಯ ಪಿಂಚಣಿಗಳು ಬರುತ್ತಿಲ್ಲ ಆಸ್ಪತ್ರೆ ಚಿಕಿತ್ಸಾ ವೆಚ್ಚದಲ್ಲಿ ಕಾರ್ಮಿಕರಿಗೆ ಬಾರಿ ರೀತಿ ಅನ್ಯಾಯವಾಗುತ್ತಿದೆ ಕಾರ್ಮಿಕರಿಗೆ ನೇರ ಪಾವತಿಯಾಗುವ ಯೋಜನೆಗಳನ್ನು ಮಾತ್ರ ತರುವಂತೆ ಮತ್ತು ಕಾರ್ಮಿಕರಿಗೆ ಅಗತ್ಯ ಇಲ್ಲದ ಹೆಲ್ತ್ ಕ್ಯಾಂಪ್ ಗಳು ಟ್ರೈನಿಂಗ್ ಕ್ಯಾಂಪ್ಗಳ್ಳನು ತಂದು ಕಟ್ಟಡ ಮಂಡಳಿಯ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ.
ಕೇವಲ ಕಾರ್ಮಿಕರಿಗೆ ವಂಚಿಸುವ ಕೆಲಸ ಕಟ್ಟಡ ಮಂಡಳಿಯಿಂದ ಆಗುತ್ತಿದೆ ಈ ಬಗ್ಗೆ ಕಾರ್ಮಿಕರು ಜಾಗೃತಿ ವಹಿಸಬೇಕು ಜುಲೈ 7ರಂದು ಈ ಕುರಿತು ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರ ಕಚೇರಿಯ ಎದುರು ಬೃಹತ್ ಕಾರ್ಮಿಕ ಜಾದಾವನ್ನು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಆಯೋಜಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಮ್ ಎಸ್ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಅವರು ಮಾತನಾಡಿ ಕಾರ್ಮಿಕರ ಪರವಾಗಿ ಸದಾ ನಾವು ಧ್ವನಿ ಎತ್ತಲಿದ್ದೇವೆ ಇದೀಗ ಕಾರ್ಮಿಕರಿಗೆ ಕಟ್ಟಡ ನಿರ್ಮಾಣದ ಸಾಮಗ್ರಿಗಳು ದೊರಕದೆ ಕಾರ್ಮಿಕರು ಕೆಲಸ ಇಲ್ಲದೆ ಬಳಲುವಂತಾಗಿದೆ ಈ ಸಮಸ್ಯೆಯನ್ನು ಶೀಘ್ರವಾಗಿ ಜಿಲ್ಲಾಡಳಿತವನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಎಮ್ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್ ಬಿ ಎಂ ಎಸ್ ನ ಜಿಲ್ಲಾಧ್ಯಕ್ಷರಾದ ವಕೀಲ ರಾದ ಅನಿಲ್ ಕುಮಾರ್ ಬಿಎಂಎಸ್ ನ ತಾಲೂಕು ಅಧ್ಯಕ್ಷರಾದ ವಕೀಲ ಉದಯ್ ಬಿಕೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಶೆಟ್ಟಿ ಮತ್ತು ಪ್ರಮುಖರಾದ ಉದಯ್ ಕುಮಾರ್, ಉಜಿರೆ ಗಣೇಶ್ ಪೂಜಾರಿ ಪೆರಾಡಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು ಕುಮಾರ್ ನಾಧ್ ಸ್ವಾಗತಿಸಿ ಗಣೇಶ್ ಪೂಜಾರಿ ವಂದಿಸಿದರು.

