Thu. Jul 3rd, 2025

Kokradi: ಶ್ರೀ, ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಹಾಗೂ ಸ.ಪ್ರೌ.ಶಾಲೆ & ಪ.ಪೂ.ಕಾಲೇಜು ಕೊಕ್ರಾಡಿ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಗಿಡ ನಾಟಿ ಕಾರ್ಯಕ್ರಮ

ಕೊಕ್ರಾಡಿ:(ಜು.2) ಶ್ರೀ, ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಹಾಗೂ ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕೊಕ್ರಾಡಿ ಇವುಗಳ ಸಹಕಾರ ದೊಂದಿಗೆ ಪರಿಸರ ಜಾಗೃತಿ ಮಾಹಿತಿ ಗಿಡ ನಾಟಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆ ಸದಸ್ಯರು ರಾಜು, ಪಿ, ಶೆಟ್ಟಿ ಉದ್ಘಾಟನೆ ಮಾಡಿ ಮಾತನಾಡಿ, ಮುಂದಿನ ಪೀಳಿಗೆಯ ನೆಮ್ಮದಿ ಜೀವನಕ್ಕೆ ಪರಿಸರ ಸಂರಕ್ಷಣೆ ಅತೀ ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ: 🟣ಉಜಿರೆ: ಕೆ.ಎಸ್.ಎಂ.ಸಿ.ಎ ಉಜಿರೆ ಘಟಕದ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಸುಮಂತ್ ಕುಮಾರ್ ಜೈನ್ ರವರಿಗೆ ಸನ್ಮಾನ

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಶ್ರೀಮತಿ ವಿಶಾಲ್ ಕೆ ರವರು , ಯೋಜನೆ ನಡೆದು ಬಂದ ದಾರಿ ಯೋಜನೆ ಯಿಂದ ಸಿಗುವ ಸೌಲಭ್ಯದ ಬಗ್ಗೆ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.


ಶಾಲೆಯ ಪ್ರಾಂಶುಪಾಲರಾದ ದಯಾನಂದ್ ರವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ,ಪ್ರಾಣಿ ಪಕ್ಷಿ ಗಳಿಗೆ ಎಲ್ಲಾ ಸಮಯದಲ್ಲಿ ಆಹಾರ ಸಿಗುವ ರೀತಿಯಲ್ಲಿ ನಾವು ಹೆಚ್ಚು ಹೆಚ್ಚು ಗಿಡ ನಾಟಿ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದಿನದಂದು ಗಿಡ ನಾಟಿ ಮಾಡುವಂತೆ ಮಾಹಿತಿ ನೀಡಿದರು.


ಪರಿಸರ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ತಾಲೂಕಿನ ಸಿಎಸ್‌ ಸಿ ನೋಡಲ್ ಅಧಿಕಾರಿ ಸುರೇಶ್‌ ರವರು ಸಾಮಾನ್ಯ ಸೇವಾ ಕೇಂದ್ರ ದಲ್ಲಿ ಸಿಗುವ ಸೇವೆ ಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರು ಕೃಷ್ಣ, ಮುಖ್ಯ ಶಿಕ್ಷಕ ಮಹಮ್ಮದ್ ರಿಯಾಜ್, ಕೊಕ್ರಾಡಿ ಮತ್ತು ಸಾವ್ಯ ಒಕ್ಕೂಟದ ಅಧ್ಯಕ್ಷರುಗಳಾದ, ಶ್ರೀಮತಿ ವಾರಿಜ, ಯಮುನಾ, ವಿಪತ್ತು ಘಟಕ ಸಂಯೋಜಕರು ಹರಿಣಾಕ್ಷಿ, ದಿನೇಶ್ ಶೆಟ್ಟಿ ಸಂತೋಷ್ ಪೂಜಾರಿ, ಅಣ್ಣಿ ಎಂ.ಕೆ., ರಾಜು ಪೂಜಾರಿ, ಕರಿಯ ಪೂಜಾರಿ, ಹರೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನಯ ಅಕ್ಕಮ್ಮ, ಶಾಲಾ ಅಧ್ಯಾಪಕಿ ಲವೀನಾ ವೀಣಾ ಡಯಾಸ್ ಸ್ವಾಗತಿಸಿ, ಸಹ ಶಿಕ್ಷಕಿ ವಿದ್ಯಾ ಧನ್ಯವಾದ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು, ಎಸ್.ಡಿ.ಎಂ.ಸಿ, ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *