Thu. Jul 3rd, 2025

Bihar: ಮದುವೆಯಾಗಿ 45 ದಿನಕ್ಕೆ ಗಂಡನ ಕೊಂದು, ಮಾವನ ಜತೆ ಓಡಿ ಹೋದ ಮಹಿಳೆ

ಬಿಹಾರ (ಜು.03): ಮದುವೆಯಾಗಿ ಕೇವಲ ತಿಂಗಳಿಗೆ ಗಂಡನನ್ನು ಕೊಂದು ಮಹಿಳೆಯೊಬ್ಬಳು ಮಾವನ ಜತೆ ಓಡಿ ಹೋಗಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ. ಮದುವೆಯಾಗಿ 45ದಿನಕ್ಕೆ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಳು. ಈ ಘಟನೆಯು ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಹತ್ಯೆಯನ್ನು ನೆನಪಿಸುತ್ತದೆ. ಅಲ್ಲಿ ಕೂಡ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹನ ಜತೆ ಸೇರಿ ಹನಿಮೂನ್​​ಗೆ ಹೋದಾಗ ಗಂಡನನ್ನು ಹತ್ಯೆ ಮಾಡಿಸಿದ್ದಳು.

ಇದನ್ನೂ ಓದಿ: ⭕ಮಂಗಳೂರು: ವಿವಿಧ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜಕರಿಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ

ಔರಂಗಾಬಾದ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಮೃತ ಪ್ರಿಯಾಂಶು ಅಲಿಯಾಸ್ ಛೋಟು ಅವರ ಪತ್ನಿ ಗುಂಜಾ ಸಿಂಗ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 24ರ ರಾತ್ರಿ ನಬಿನಗರ ಪೊಲೀಸ್ ಠಾಣೆ ಪ್ರದೇಶದ ಲೆಂಬೋಕಾಪ್ ಬಳಿ ಘಟನೆ ನಡೆದಿತ್ತು. ಪ್ರಿಯಾಂಶುವನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಕುರಿತು ಎಸ್​ಪಿ ಅಂಬರೀಶ್ ರಾಹುಲ್ ಮಾಹಿತಿ ನೀಡಿದ್ದಾರೆ.

ಈ ಕೊಲೆಗೆ ಸೂತ್ರಧಾರಿ ಪ್ರಿಯಾಂಶು ಅವರ ಪತ್ನಿ ಗುಂಜಾ ಸಿಂಗ್. ಆಕೆಗೆ ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವ ಜೀವನ್​ಸಿಂಗ್ ಜತೆ ಅಕ್ರಮ ಸಂಬಂಧವಿತ್ತು. ಮದುವೆಯ ನಂತರ ಪ್ರಿಯಾಂಶು ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದ, ಹೀಗಾಗಿ ಇಬ್ಬರೂ ಶೂಟರ್​ಗಳನ್ನು ನೇಮಿಸಿಕೊಂಡು ಕೊಲ್ಲಲು ಸಂಚು ರೂಪಿಸಿದ್ದರು.

ಜೂನ್ 24ರಂದು ಪ್ರಿಯಾಂಶು ರಾತ್ರಿ ಗ್ರಾಮವಾದ ಬರ್ವಾನ್​​ಗೆ ಬೈಕ್​ನಲ್ಲಿ ಹಿಂದಿರುಗುತ್ತಿದ್ದಾಗ, ಗುಂಡು ಹಾರಿಸಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದರು.ಎಸ್‌ಐಟಿ ಗುಂಜಾ ಸಿಂಗ್, ಜೈಶಂಕರ್ ಮತ್ತು ಮುಖೇಶ್ ಶರ್ಮಾ ಅವರನ್ನು ಬಂಧಿಸಿದೆ.

ವಿಚಾರಣೆ ಸಮಯದಲ್ಲಿ ತನ್ನ ಗಂಡನ ಕೊಲೆಯಲ್ಲಿ ತನ್ನ ಕೈವಾಡವಿದೆ ಎಂದು ಗುಂಜಾ ಒಪ್ಪಿಕೊಂಡಿದ್ದಾಳೆ. ಪೊಲೀಸರು ಜೀವನ್ ಸಿಂಗ್​​ನನ್ನು ಕೂಡ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *