ಮಣಿಪಾಲ:(ಜು.3) : ಈಶ್ವರನಗರದ ಎಂಐಟಿ ಕಾಲೇಜು ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಬಸ್ ನಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ಸಾಮೆತ್ತಡ್ಕದ ಮನೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ
ಮೃತರನ್ನು ವಿನೋದ ಸಿಸ್ಟರ್ (65) ಎಂದು ಗುರುತಿಸಲಾಗಿದೆ. ಅವರು ತನ್ನ ಮಗಳ ಮಕ್ಕಳನ್ನು ಶಾಲಾ ಬಸ್ ನಿಂದ ಇಳಿಸಿ ಮನೆ ಬಿಟ್ಟು ಬಳಿಕ ಉಪ್ಪೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಬಸ್ ನ ಚಕ್ರದಡಿಗೆ ಸಿಲುಕಿದ ಮಹಿಳೆಯ ದೇಹ ಛಿದ್ರ ಛಿದ್ರಗೊಂಡಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.



