Fri. Jul 4th, 2025

ಬೆಳ್ತಂಗಡಿ: ಬೆಳ್ತಂಗಡಿಯ ನ್ಯಾಯಾಲಯ & ವಕೀಲರ ಸಂಘಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಭೇಟಿ

ಬೆಳ್ತಂಗಡಿ:(ಜು.3)ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ರವರು ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜುಲೈ 2 ರಂದು ಭೇಟಿ ನೀಡಿದರು.

ಇದನ್ನೂ ಓದಿ: 🟠ಕನ್ಯಾಡಿ: ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಮಕ್ಕಳ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ

ಈ ಸಂದರ್ಭದಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸರ್ಕಾರದಿಂದ ಮಂಜೂರಾಗಿರುವ ಅನುದಾನದ ವಿಚಾರದಲ್ಲಿ ಬೆಳ್ತಂಗಡಿಯ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ರವರು ನೂತನ ನ್ಯಾಯಾಲಯದ ಸಂಕೀರ್ಣವನ್ನು ಈಗ ಇರುವ 60 ವರ್ಷ ಹಳೆಯದಾದ ಕಟ್ಟಡ ಇರುವ ಜಾಗದಲ್ಲಿಯೇ ನಿರ್ಮಿಸುವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿ ಆ ಬಗ್ಗೆ ಸಂಘದ ಪರವಾಗಿ ಮನವಿ ಸಲ್ಲಿಸಿದರು.

ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ರವರು ಮಾತನಾಡುತ್ತಾ ವಕೀಲರ ಸಂಘದ ಮನವಿಯಂತೆ ಹೈಕೋರ್ಟ್ ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿ ಜುಲೈ 12 ರಂದು ನಡೆಯುವ ಲೋಕ ಅದಾಲತ್ ನಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳನ್ನು ರಾಜಿ ಪಂಚಾತಿಕೆ ಮೂಲಕ ಇತ್ಯರ್ಥಪಡಿಸುವಂತೆvಅವರು ವಕೀಲರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮನು ಬಿ. ಕೆ, ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಸಂದೇಶ್, ಹೆಚ್ಚುವರಿ ಸಿವಿಲ್ ಮತ್ತು
ಜೆ ಎಂ ಎಫ್ ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಲೋಬೋ ಉಪಸ್ಥಿತರಿದ್ದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಸ್ವಾಗತಿಸಿ, ಹೆಚ್ಚುವರಿ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ವಂದಿಸಿದರು.

Leave a Reply

Your email address will not be published. Required fields are marked *