Fri. Jul 4th, 2025

Belthangady:(ಜು.05) ಬಿಜೆಪಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ವತಿಯಿಂದ ಕಲ್ಲೇರಿಯಲ್ಲಿ ಪ್ರತಿಭಟನೆ

ಬೆಳ್ತಂಗಡಿ:(ಜು.4) ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ
ಉಪ್ಪಿನಂಗಡಿ – ಬೆಳ್ತಂಗಡಿ ಮುಖ್ಯ ರಸ್ತೆಯ ಕುಪ್ಪೆಟ್ಟಿ -ಕಲ್ಲೇರಿ – ಉಪ್ಪಿನಂಗಡಿ ತನಕ ಸಂಚಾರಕ್ಕೆ ಯೋಗ್ಯವಿಲ್ಲದೆ

ಇದನ್ನೂ ಓದಿ: ⭕ಉಳ್ಳಾಲ: ನಾಪತ್ತೆಯಾದ ಯುವಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿರುವ ಸಮಸ್ಯೆ ಮತ್ತು ರಾಜ್ಯ ಸರ್ಕಾರ ಈವರೆಗೆ ಯಾವುದೇ ಅನುದಾನ ನೀಡದೆ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದು ರಸ್ತೆಯೂ ಕೆರೆಯಂತಾಗಿದ್ದು ಜನ ಓಡಾಡಲು ಕಷ್ಟಪಡುತ್ತಿರುವ ಕುರಿತು

ರಾಜ್ಯ ಸರ್ಕಾರ ಆದಷ್ಟು ಬೇಗ ಅನುದಾನ ನೀಡಿ ರಸ್ತೆ ಸರಿ ಪಡಿಸುವಂತೆ ಜುಲೈ 05 ಶನಿವಾರ,ಬೆಳಗ್ಗೆ 9.30 ಕ್ಕೆ ಸರಿಯಾಗಿ ಕಲ್ಲೇರಿ ಬಸ್ ನಿಲ್ದಾಣ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *