ವೇಣೂರು: (ಜು.4) ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಗರ್ಡಾಡಿಯಿಂದ ವೇಣೂರು ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಮಾನ್ಯ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಗಮನಕ್ಕೆ ತಂದಾಗ ಕೂಡಲೇ ಜೆಸಿಬಿ ಹಾಗೂ ಟಿಪ್ಪರ್ ವ್ಯವಸ್ಥೆಯನ್ನು ಮಾಡಿ ಸಕಾಲಕ್ಕೆ ಸ್ಪಂದಿಸಿದ್ದಾರೆ.

ಇದನ್ನೂ ಓದಿ: 🟢ಕನ್ಯಾಡಿ : ಕನ್ಯಾಡಿ ಸರ್ಕಾರಿ ಶಾಲೆಯ ಪೋಷಕರ ಸಭೆಗೆ ದಾಖಲೆಯ ಸಂಖ್ಯೆಯಲ್ಲಿ ಪೋಷಕರು ಭಾಗಿ
ತುರ್ತು ಕರೆಗೆ ಸ್ಪಂದಿಸಿದ ಮಾನ್ಯ ಶಾಸಕರಾದ ಹರೀಶ್ ಪೂಂಜ, ಲೋಕೋಪಯೋಗಿ ಇಂಜಿನಿಯರ್ ಶಿವಕುಮಾರ್ , ಮುಗೆರೋಡಿ ಸಂಸ್ಥೆಯ ಉದಯ್ ರವರಿಗೆ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಪಡಂಗಡಿ ಸಿ.ಎ.ಬ್ಯಾಂಕ್ ನಿರ್ದೇಶಕ ಕೃಷ್ಣಪ್ಪ ಪೂಜಾರಿ ,ಕಾರ್ಯದರ್ಶಿ ಯಾದವ ಕೋಟ್ಯಾನ್, ಮಂಜು ಪ್ರಸಾದ್, ಶಕ್ತಿ ಕೇಂದ್ರ ಪ್ರಮುಖ್ ದಿನಕರ ಕುಲಾಲ್ ಸಹಕರಿಸಿದರು.


