ಬೆಳ್ತಂಗಡಿ: (ಜು.5) ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಶ್ರೀ ಗೋಕುಲದಾಸ್ ಅಧೀಕ್ಷಕರು, ಲೋಕೋಪಯೋಗಿ ಇಲಾಖೆ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯ್ಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನ್ಯಾಯಾಧೀಶ ರೊಂದಿಗೆ ಮತ್ತು ವಕೀಲರೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: ⭕ಪುತ್ತೂರು: ಯುವತಿಗೆ ವಂಚಿಸಿ ಗರ್ಭವತಿ ಮಾಡಿದ ಪ್ರಕರಣ
ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ, ಹಿರಿಯ ಸಮಿತಿ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೊ, ನ್ಯಾಯವಾದಿ ಹಾಗೂ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಯ ಅಧ್ಯಕ್ಷರಾದ ರಕ್ಷಿತ್ ಶಿವರಾಮ್, ವಕೀಲರು ಹಾಗೂ

ಜಿಲ್ಲಾ ಕೆ ಡಿ ಪಿ ಸದಸ್ಯರಾದ ಬಿ ಸಂತೋಷ್ ಕುಮಾರ್, ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್ ಎ, ಕೋಶಾಧಿಕಾರಿ ಪ್ರಶಾಂತ್ ಎಂ, ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ., ನಗರ ಬ್ಲಾಕ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.


