ಗೇರುಕಟ್ಟೆ:(ಜು.7) ಶಾಲಾ ಕಾಲೇಜು ಪ್ರಾರಂಭಗೊಂಡ ಪ್ರಾರಂಭದ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ಮಂತ್ರಿಮಂಡಲ ರಚನೆ ಮಾಡುವುದು ವಾಡಿಕೆ ಗೇರುಕಟ್ಟೆಯ ಮನ್ ಶರ್ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯ ಪ್ರಕ್ರಿಯೆಯಂತೆ ವಿದ್ಯಾರ್ಥಿ ಸಭಾ ಕ್ಷೇತ್ರ ಚುನಾವಣೆಯನ್ನು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದರ ಉದ್ದೇಶಕ್ಕಾಗಿ ಅಣಕು ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು.

ಇದನ್ನೂ ಓದಿ: ⭕ಉಡುಪಿ: ಜ್ಯೂಸ್ ನಲ್ಲಿ ಮತ್ತು ಬರುವ ಮದ್ದು ಹಾಕಿ ಯುವತಿಯೊಂದಿಗೆ ದೈಹಿಕ ಸಂಪರ್ಕ
ಪ್ರಕ್ರಿಯೆಯನ್ನು ವೀಕ್ಷಿಸಲು ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರಾದ ಪೃಥ್ವಿ ಸಾನಿಕಂ, ಕೊಕ್ಕಡ ಹೋಬಳಿಯ ಕಂದಾಯ ನಿರೀಕ್ಷಕರಾದ ಪಾವಡಪ್ಪ ದೊಡ್ಡಮನಿ, ಹಾಗೂ ಕಳಿಯ ಗ್ರಾಮ ಪಂಚಾಯತ್ ಗ್ರಾಮಕರಣೀಕರಾದ ಶ್ರೀ ಪೃಥ್ವಿ ರವರು ಸಂಸ್ಥೆಗೆ ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆಯನ್ನು ಮಾಡಿ ಸಾಧಕ ಜೀವನಕ್ಕೆ ಬೇಕಾದ ಹಲವಾರು ಪ್ರೇರಣ ಮಾಹಿತಿಯನ್ನು ನೀಡಿದರು.
ಮನ್ ಶರ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸೈಯದ್ ಉಮರ್ ಅಸ್ಸಖಾಫ್ ತಂಗಳ್ ರವರು ಭೇಟಿ ನೀಡಿ ಚುನಾವಣೆ ಪ್ರಕ್ರಿಯೆ ಮಾಹಿತಿಯನ್ನು ಪಡೆದು, ಈ ಅಣುಕು ಮತದಾನ ಪ್ರದರ್ಶನದ ಯಶಸ್ವಿಗೆ ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗದವರ ಕಾರ್ಯವನ್ನು ಶ್ಲಾಘಿಸಿದರು.

ವಿಧಾನಸಭಾ ಚುನಾವಣೆಯಂತೆ ವಿವಿಧ ಚುನಾವಣೆಯ ದಿನಾಂಕ ಘೋಷಣೆ, ನೀತಿ ಸಂಹಿತೆ ಜಾರಿ, ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಹಾಗೂ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡ ಹತ್ತು ಕ್ಷೇತ್ರಗಳ ರಚನೆಯನ್ನು ಮಾಡಿ ಮಾದರಿ ಹೆಸರುಗಳನ್ನು ಇಟ್ಟು ಮೂರು ವಿದ್ಯಾರ್ಥಿ ಪಕ್ಷಗಳನ್ನ ರಚಿಸಿ ಚುನಾವಣಾ ಪ್ರಕ್ರಿಯೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು ,10 ವಿದ್ಯಾರ್ಥಿ ಸಭಾ ಕ್ಷೇತ್ರಗಳಿಗೆ ಸುಮಾರು 30 ಅಭ್ಯರ್ಥಿಗಳು ಹಾಗೂ ಎರಡು ಸ್ವತಂತ್ರ ಅಭ್ಯಾರ್ಥಿಗಳು ಕಣದಲ್ಲಿ ಸ್ಪರ್ಧಿಸಿದರು.
ಪಾರ್ಟಿ ಬೂತ್, ಮತಗಟ್ಟೆ, ಮತಗಟ್ಟೆಯಲ್ಲಿ ಪಾಲಿಸಬೇಕಾದ ವಿವಿಧ ಅಧಿಕಾರಿಗಳ ನಿಯೋಜನೆ , ಈವಿಎಂ ಮಷೀನ್, ಬ್ಯಾಲೆಟ್ ಪೇಪರ್, ಮತ ಎಣಿಕೆ,ಫಲಿತಾಂಶ ಘೋಷಣೆ, ರಾಜ್ಯಪಾಲರಿಗೆ ವಿಶ್ವಾಸ ಮತ ಮಂಡನೆ, ಬಹುಮತ ಪಡೆದ ಪಕ್ಷದಿಂದ ಸರ್ಕಾರ ರಚನೆ ಮುಂತಾದ ಚುನಾವಣೆಗೆ ಸಂಬಂಧಿಸಿದ ಹಂತಗಳನ್ನು ಅಣುಕು ಪ್ರದರ್ಶನದ ಮೂಲಕ ಮಕ್ಕಳಿಗೆ ಅರಿವನ್ನು ನೀಡಲಾಯಿತು.

ಚುನಾವಣೆ ಫಲಿತಾಂಶ ಪ್ರಕಟಗೊಂಡಾಗ ನಕ್ಷತ್ರ ಚಿಹ್ನೆಯ ಲರ್ನರ್ಸ್ ಪಾರ್ಲಿಮೆಂಟ್ ಲೀಗ್ ಪಕ್ಷವು ಬಹುಮತವನ್ನು ಪಡೆದು ಸರಕಾರ ರಚನೆಯನ್ನು ಮಾಡಿತು. ಪಕ್ಷದ ಪ್ರಭಾವಿ ಅಭ್ಯರ್ಥಿ ಅಬೂಬಕರ್ ಶಾಹಿದ್ ರವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಯಿತು. ಮಹಮ್ಮದ್ ಜಾಹಿದ್ ಉಪಮುಖ್ಯಮಂತ್ರಿಯಾಗಿ, ಮಹಮ್ಮದ್ ಸಹಲ್ ಆರೋಗ್ಯ ಮಂತ್ರಿ, ಮಹಮ್ಮದ್ ರಾಹಿದ್ ಕ್ರೀಡಾ ಮಂತ್ರಿ, ಮಹಮ್ಮದ್ ತಾಹಿರ್, ಶಿಸ್ತು ಪಾಲನಾ ಮಂತ್ರಿ, ಮಹಮ್ಮದ್ ಸಫಿಯುಲ್ಲಾ ಶಿಕ್ಷಣ ಮಂತ್ರಿ, ಪಿ.ಕೆ ಮಹಮ್ಮದ್ ಅನಸ್ ರವರು ವಿರೋಧ ಪಕ್ಷ ನಾಯಕರಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿಯವರು ನಿರ್ವಹಿಸಿದರು, ಪಿ ಆರ್ ಓ ಅಧಿಕಾರಿಯಾಗಿ ಪ್ರಾಂಶುಪಾಲರಾದ ಝೀನತ್ ಬಾನು ಅವರು ಕಾರ್ಯನಿರ್ವಹಿಸಿದರು. ಮನ್ ಶರ್ ಪಿಯು ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು, ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ಹಾಗೂ ಮನ್ ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಿಕ್ಷಕ, ಶಿಕ್ಷಕೇತರ ವೃಂದದವರ ಸಹಕಾರ ದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂಬುದಾಗಿ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮಾರ್ದಾಳ ಮಾಹಿತಿಯನ್ನು ನೀಡಿದರು.
