Mon. Jul 7th, 2025

Udupi: ಜ್ಯೂಸ್ ನಲ್ಲಿ ಮತ್ತು ಬರುವ ಮದ್ದು ಹಾಕಿ ಯುವತಿಯೊಂದಿಗೆ ದೈಹಿಕ ಸಂಪರ್ಕ – ಬೇರೆ ಮದುವೆಯಾಗಲು ಹೊರಟ ಯುವಕ ಅರೆಸ್ಟ್

ಉಡುಪಿ: (ಜು.7)ಜ್ಯೂಸ್ ನಲ್ಲಿ ಮತ್ತು ಬರುವ ಮದ್ದು ಹಾಕಿ ಅರೇಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ⭕ಪುತ್ತೂರು: ಯುವಕ & ಯುವತಿಯ ಫೋಟೋ ,ವಿಡಿಯೋ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ಕಿರುಕುಳ

ಬಂಧಿತ ಆರೋಪಿಯನ್ನು ಉಡುಪಿಯ ಕೊಳಲಗಿರಿಯ ನರ್ನಾಡುಗುಡ್ಡೆ ಗ್ರಾಮದ ಲಕ್ಷ್ಮೀನಗರ ನಿವಾಸಿ ಸಂಜಯ್ ಕರ್ಕೇರ (28) ಎಂದು ಗುರುತಿಸಲಾಗಿದೆ.


ಆರೋಪಿ ಸಂಜಯ್ ಹಾಗೂ ಕೊಳಲಗಿರಿ ಗ್ರಾಮದ ಯುವತಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಅದರಂತೆ ಜು. 11, 2024 ರಲ್ಲಿ ಆರೋಪಿಯು ಯುವತಿಯನ್ನ ಚಿಕ್ಕಮಗಳೂರು ಜಿಲ್ಲೆಯ ಕಳಸಕ್ಕೆ ಸುತ್ತಾಡಲು ಬಂದಿದ್ದರು. ಈ ವೇಳೆ ಚಾರಣಕ್ಕೆಲ್ಲ ಹೋಗಿ ಬಂದು ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ನೀಡಿ ಆಕೆ ಅರೇಪುಜ್ಞಾವಸ್ಥೆಗೆ ತಲುಪುತ್ತಿದ್ದಂತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.


ಈ ಬಗ್ಗೆ ತಿಳಿದಾಗ ಯುವತಿ ಗಲಾಟೆ ಮಾಡಿದ್ದಾಳೆ, ಈ ವೇಳೆ ನಿನ್ನನ್ನೇ ಮದುವೆಯಾಗುವುದಾಗಿ ಹೇಳಿ ಶೃಂಗೇರಿಯ ದೇವಾಲಯಕ್ಕೆ ಕರೆದೊಯ್ದು ಹಣೆಗೆ ಕುಂಕುಮ ಇಟ್ಟು ಹಾರ ಹಾಕಿದ್ದ. ಅಲ್ಲದೆ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗೋಣ ಎಂದು ಹೇಳಿದ್ದ…

ಈ ಘಟನೆಯಾದ ಬಳಿಕ ಸಂತ್ರಸ್ತ ಯುವತಿಯ ಬಳಿ ಮದುವೆಯಾಗುವಾಗಿ ಹೇಳಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಇದೀಗ ದಿಢೀರ್ ಆಗಿ ಬೇರೊಂದು ಯುವತಿಯ ಜೊತೆ ಮದುವೆ ನಿಶ್ಚಯವಾಗುತ್ತಿದ್ದಂತೆ ಆರೋಪಿಯ ನಿಜ ಬಣ್ಣ ಬಯಲಾಗಿದ್ದು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.


ಕೂಡಲೇ ಪೋಷಕರು ಸಂಜಯ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಇದೀಗ ಆರೋಪಿ ಸಂಜಯ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *