Tue. Jul 8th, 2025

ಉಜಿರೆ: ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ ನ (ರಿ.) 3ನೇ ವರ್ಷದ ಮೊಸರುಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಉಜಿರೆ: (ಜು.೮) ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ (ರಿ) ರೆಂಜಾಳ ಉಜಿರೆ ಇದರ ಆಶ್ರಯದಲ್ಲಿ ನಡೆಯುವ 3ನೇ ವರ್ಷದ ಮೊಸರುಕುಡಿಕೆ ಉತ್ಸವದ ಸಮಿತಿಯ ಪದಾಧಿಕಾರಿಗಳನ್ನು ಗೌರವಾಧ್ಯಕ್ಷರಾದ ಕಿರಣ್ ಕುಮಾರ್ ಕೀರ್ತಿ ಇವರ ನಿವಾಸದಲ್ಲಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ : ⭕ಮಂಗಳೂರು: ಹೃದಯಾಘಾತಕ್ಕೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ

ಅಧ್ಯಕ್ಷರಾಗಿ ಕುಮಾರಿ ವಂದಿತಾ ಪ್ರಭು , ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ರೂಪಾ ರಿತೇಶ್ , ಕೋಶಾಧಿಕಾರಿಗಳಾಗಿ ಕುಮಾರಿ ಮೋಕ್ಷಿತಾ ಹಾಗೂ ಸದಸ್ಯರುಗಳನ್ನು ರೆಂಜಾಳ ವಾರ್ಡಿನ ಸರ್ವ ಸದಸ್ಯರು ಸೇರಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಈ ಸಲದ ವಿಶೇಷ ಉತ್ಸವದ ಸಂಪೂರ್ಣ ಹೊಣೆಗಾರಿಕೆ ಮಹಿಳೆಯರು ಮುಂದೆ ನಿಂತು ವಿಜೃಂಭಣೆಯಿಂದ ಆಚರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *