Tue. Jul 8th, 2025

Dharmasthala: ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ & ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

ಧರ್ಮಸ್ಥಳ :(ಜು.08) ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ ಹಾಗೂ ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರವರು ಜುಲೈ 08 ರಂದು ಧರ್ಮಸ್ಥಳ ದಲ್ಲಿ ಚಾಲನೆ ನೀಡಿದರು.

ಇದನ್ನೂ ಓದಿ: 🟠ಉಜಿರೆ: ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ ನ (ರಿ.) 3ನೇ ವರ್ಷದ ಮೊಸರುಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲ , ಉಪಾಧ್ಯಕ್ಷರಾದ ಶ್ರೀನಿವಾಸ್ ರಾವ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್,ಪ್ರಮುಖರಾದ ರತ್ಮವರ್ಮ ಜೈನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,

ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹ ಸಂಚಾಲಕರಾದ ಸಂದೀಪ್ ರೈ, ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ ಬಂದಾರು, ಧರ್ಮಸ್ಥಳ ಶಕ್ತಿ ಕೇಂದ್ರ ಪ್ರಮುಖರಾದ ಹರ್ಷಿತ್ ಜೈನ್, ವಿಕ್ರಮ್ ಗೌಡ, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ದಿನೇಶ್ ರಾವ್, ರವಿ ಕುಮಾರ್,

ಬಂದಾರು ಗ್ರಾಮಸ್ಥರಾದ ಶ್ರೀಧರ ಗೌಡ , ಡೊಂಬಯ್ಯ ಗೌಡ, ಪ್ರಶಾಂತ್ ಗೌಡ,ಮೋಹನ್ ಬಂಗೇರ, ಪಟ್ರಮೆ ಪಂಚಾಯತ್ ಶಕ್ತಿ ಕೇಂದ್ರ ಪ್ರಮುಖರಾದ ಡಾಗಯ್ಯ ಗೌಡ, ಪಟ್ರಮೆ ಪಂಚಾಯತ್ ಸದಸ್ಯರಾದ ರಾಜೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಕಮಲಾಕ್ಷ, ಶರತ್, ಶ್ರೀನಿವಾಸ ಗೌಡ ಪಟ್ರಮೆ, ಹರೀಶ್ ಗೌಡ ಶಿಬರಾಜೆ, ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *