Tue. Jul 8th, 2025

Kanyadi: ಮಹಾಮಂಡಲೇಶ್ವರ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕನ್ಯಾಡಿ :(ಜು.8) ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಭಗವಂತನ ಅನುಗ್ರಹದಿಂದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಗೌರವಿಸಲಾಯಿತು.

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಸಂಘಟನೆಯ ಪ್ರಮುಖರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಯೋಗೀಶ್ ಆರ್ ಯೈಕುರಿ, ಕರುಣಾಕರ ಹೆಗ್ಡೆ ಬೊಕ್ಕಸ, ಯತೀಶ್ ವೈ.ಎಲ್ ಬಳಂಜ, ಸಂತೋಷ್ ಕುಮಾರ್ ಹಿಮರಡ್ಡ, ವಿಜಯ ಪೂಜಾರಿ ಯೈಕುರಿ, ಪ್ರಶಾಂತ್ ಅಂಚನ್ ಮಜಲೋಡಿ, ಜಗದೀಶ್ ಕೋಟ್ಯಾನ್ ತಾರಿಪಡ್ಪು, ಪ್ರಶಾಂತ್ ಕೋಟ್ಯಾನ್ ದರ್ಖಾಸು,

ರಂಜಿತ್ ಪೂಜಾತಿ ಮಜಲಡ್ಡ, ಜಯಪ್ರಸಾದ್ ಕೋಟ್ಯಾನ್ ದರ್ಖಾಸು, ಸುಧೀಶ್ ತಾರಿಪಡ್ಪು, ಸಂಪತ್ ಪಿ ಕೋಟ್ಯಾನ್ ಪುಣ್ಕೆದೊಟ್ಟು, ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು, ಶರತ್ ಅಂಚನ್ ಬಾಕ್ಯರಡ್ಡ, ದಿನೇಶ್ ಪೂಜಾರಿ ನಿಟ್ಟಡ್ಕ, ಚಂದ್ರಹಾಸ ಬಳಂಜ, ರಕ್ಷಿತ್ ಪೂಜಾರಿ ಬಗ್ಯೋಟ್ಟು, ಸುಧೀರ್ ಸಾಲಿಯಾನ್ ಮಜಲೋಡಿ, ಸತೀಶ್ ಕೋಟ್ಯಾನ್ ಹುಂಬೆಜೆ, ಪ್ರಣಮ್ ಶೆಟ್ಟಿ ಖಂಡಿಗ, ಮಹೇಶ್ ಕುಲಾಲ್ ನಾಲ್ಕೂರು, ಪ್ರಥಮ್ ಕುಮಾರ್ ಹೊಸಮನೆ, ಸತ್ಯಸಾಯಿ ತಾರಿಪಡ್ಪು ಸಹಕರಿಸಿದರು.


ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಸಂಘಟನೆಯು ಸಮಾಜಮುಖಿ ಚಿಂತನೆಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ, ಕ್ರೀಡಾಕೂಟ ಆಯೋಜನೆ,ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Leave a Reply

Your email address will not be published. Required fields are marked *