Wed. Jul 9th, 2025

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನವೀಕರಣ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಕಣಿಯೂರು:(ಜು.9) ಕಣಿಯೂರು ಗ್ರಾಮ ಪಂಚಾಯತ್ ನ ದೈನಂದಿನ ಆಡಳಿತ ಕಾರ್ಯಗಳಿಗೆ ಅನುಕೂಲವಾಗುವ ಕಂಪ್ಯೂಟರ್ ಕೊಠಡಿ ಯು ಮಳೆಗಾಲ ದಲ್ಲಿ ನೀರು ಸುರಿದು ತೊಂದರೆಯಾಗುತ್ತಿದ್ದು, ಮತ್ತು ಫೈಲ್ ಗಳು ಮಳೆಗೆ ಒದ್ದೆಯಾಗುವ ಸಾಧ್ಯತೆಯನ್ನು ಅರಿತು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಹುಮತ ದ ನಿರ್ಣಯ ದ ಮೇರೆಗೆ ಗ್ರಾಮ ಪಂಚಾಯತ್ ಕಟ್ಟಡ ದ ನವೀಕರಣ ಕಾರ್ಯ ಆರಂಭವಾಗಿತ್ತು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್‌ಡಿಎಂ ಅನುದಾನಿತ ಶಾಲೆಯಲ್ಲಿ ಸಂಸ್ಥಾಪನಾ ದಿನ- ಚಿನ್ನರ ಆಟದ ಮನೆ ಉದ್ಘಾಟನೆ

ಆದರೆ ಆರಂಭವಾಗಿ ಕೆಲ ದಿನಗಳ ಬಳಿಕ ಕಣಿಯೂರು ಗ್ರಾಮದ ಸತೀಶ್ ರಾವ್ ಎಂಬವರು ತಾಲೂಕು ಪಂಚಾಯತ್ ನ ಆಡಳಿತ ಅಧಿಕಾರಿ ಯವರ ಮುಂದೆ ಅರ್ಜಿ ಸಲ್ಲಿಸಿ ಕಣಿಯೂರು ಗ್ರಾಮ ಪಂಚಾಯತ್ ನವೀಕರಣಕ್ಕೆ ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿದ್ದು ನಿರ್ಣಯ ವಜಾಗೊಳಿಸಿ ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಕೋರಿದ್ದರು.

ಎರಡೂ ಕಡೆಯವರ ವಾದವನ್ನು ಆಲಿಸಿದ ಆಡಳಿತಾಧಿಕಾರಿಯವರು ಕಣಿಯೂರು ಗ್ರಾಮ ಪಂಚಾಯತ್ ಕೈಗೊಂಡ ನಿರ್ಣಯ ಕಾನೂನು ಪ್ರಕಾರ ಆಗಿದೆ ಎಂದು ಅಭಿಪ್ರಾಯ ಪಟ್ಟು ಸತೀಶ್ ರಾವ್ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿರುತ್ತಾರೆ.

ಇದರಿಂದಾಗಿ ಆಡಳಿತಾಧಿಕಾರಿಯವರ ಮೌಖಿಕ ಆದೇಶದನ್ವಯ ತಡೆಹಿಡಿಯಲಾಗಿದ್ದ ನವೀಕರಣ ಕಾಮಗಾರಿ ಸಂಪೂರ್ಣಗೊಂಡಿರುತ್ತದೆ.

Leave a Reply

Your email address will not be published. Required fields are marked *