ಬೆಂಗಳೂರು, (ಜು.09): ಶಾಪಿಂಗ್ ಹೋಗಿದ್ದಕ್ಕೆ ಆಕ್ರೋಶಗೊಂಡ ಪತಿ ಹೆಂಡ್ತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪಾಠ ಕೇಳುವಾಗಲೇ ಹೃದಯಾಘಾತದಿಂದ ಮೃತಪಟ್ಟ 4ನೇ ತರಗತಿ ವಿದ್ಯಾರ್ಥಿ
ಪತಿ ಹರೀಶ್ ಕಾಲಿನಿಂದ ತುಳಿದು ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಪತ್ನಿ ಶಾಪಿಂಗ್ ಗೆ ಹೋಗಿದ್ದಕ್ಕೆ ಆಕ್ರೋಶಗೊಂಡಿದ್ದ ಹರೀಶ್, ಜಗಳ ತೆಗೆದು ಆಕೆಗೆ ಹೊಡೆದು ಕೆಳಗೆ ಬೀಳಿಸಿದ್ದಾನೆ. ಬಳಿಕ ಕಾಲಿನಿಂದ ಪತ್ನಿಯ ಕತ್ತನ್ನು ತುಳಿದು ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆಗೈದಿದ್ದಾನೆ.
ಕೋಲಾರ ಮೂಲದ ದಂಪತಿ ಬಿಇ ಪದವೀಧರರು. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಕೆಲ ತಿಂಗಳ ಹಿಂದಷ್ಟೇ ಪತಿ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ.



ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ. ಹೀಗಿರುವಾಗ ಪತ್ನಿ ಶಾಪಿಂಗ್ ಗೆ ಹೋಗಿದ್ದಕ್ಕೆ ಹರೀಶ್ ಆಕ್ರೋಶಗೊಂಡಿದ್ದು, ಪತ್ನಿ ಶಾಪಿಂಗ್ ಮುಗಿಸಿಕೊಂಡು ಮನೆ ಬರುತ್ತಿದ್ದಂತೆಯೇ ಆಕೆಯೊಂದಿಗೆ ಜಗಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆಕೆಗೆ ಹೊಡೆದು ಕೆಳಗೆ ಬೀಳಿಸಿ ಬಳಿಕ ಕತ್ತು ತುಳಿದು ಸಾಯಿಸಿದ್ದಾನೆ.
ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಹರೀಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
