Wed. Jul 9th, 2025

Venur: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜಿನಲ್ಲಿ ಭರತನಾಟ್ಯ ತರಗತಿ ಪ್ರಾರಂಭ

ವೇಣೂರು:(ಜು.9) ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು,

ಇದನ್ನೂ ಓದಿ : ⭕ಪುತ್ತೂರು: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ

ಪ್ರತೀ ಶುಕ್ರವಾರ ,ಯೋಗ ,ಸಂಗೀತ ಯಕ್ಷಗಾನ, ಕರಾಟೆ, ಡ್ಯಾನ್ಸ್ ತರಗತಿಗಳು ಪ್ರಾರಂಭಗೊಂಡಿದ್ದು ,ಇದರ ಜೊತೆಗೆ ವಿದುಷಿ ಶ್ರೀಮತಿ ನಿಶಾ ಪ್ರಸಾದ್ ಇವರು ಭರತನಾಟ್ಯ ತರಗತಿಯನ್ನು ಪ್ರಾರಂಭಿಸುತ್ತಿದ್ದಾರೆ. ದಿನಾಂಕ 08-07-2025 ರಂದು ಜ್ಞಾನವಾಹಿನಿ ತಂಡದವರಾದ ರಾಧಿಕಾ ಶೆಟ್ಟಿ ಮತ್ತು ವಿದುಷಿ ನಿಶಾ ಪ್ರಸಾದ್ ಬಳಗದವರಿಂದ 8 ಪ್ರಕಾರಗಳಲ್ಲಿ ಭರತನಾಟ್ಯ ನೃತ್ಯ ಮತ್ತು ಭರತನಾಟ್ಯ ಮುದ್ರೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *