ಪುತ್ತೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದ ಧರ್ಮ ಚಾವಡಿ’ ತುಳು ಚಿತ್ರ ಜು.11ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ: ⭕ಉಪ್ಪಿನಂಗಡಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತ್ಯು
ಪುತ್ತೂರಿನಲ್ಲಿ ಜಿ.ಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್‌ನಲ್ಲಿ ಚಿತ್ರ ಪ್ರರ್ದಶನವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮಾತನಾಡಿ, ತುಳು ಸಿನೆಮಾರಂಗದಲ್ಲಿ ನಾವು ಪ್ರಥಮವಾಗಿ ಧರ್ಮ ದೈವ ಚಿತ್ರ ಮಾಡಿದ್ದೆವು ಅದು ಬಹಳ ಯಶಸ್ವಿಯಾಗಿ ಮೂಡಿ ಬಂದಿತ್ತು. ಪ್ರೇಕ್ಷಕರಿಂದಲೂ ಬಹಳ ಪ್ರೋತ್ಸಾಹ ಸಿಕ್ಕಿತ್ತು. ಇದೀಗ ಧರ್ಮ ಚಾವಡಿ’ ಸಿನೆಮಾ ಅದ್ಭುತ ಅನುಭವವನ್ನು ನೀಡಲಿದೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಥಿಯೇಟರ್‌ಗಳಲ್ಲಿ ಸಿನೆಮಾ ಬಿಡುಗಡೆಗೊಳ್ಳಲಿದೆ . ಮಲಯಾಳ ಮತ್ತು ತುಳು ಮಣ್ಣಿನ ಪರಿಮಳವನ್ನು ಹೊಂದಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ ಎಂದರು.
ಇದು ನನ್ನ ಎರಡನೇ ಚಿತ್ರ ಚಿತ್ರದ ಟೀಸರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮುಂಬೈಯಲ್ಲಿ ಸಿನೆಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಿನೆಮಾವನ್ನು ಶ್ಲಾಘಿಸಿದ್ದಾರೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರಿದ ಭಾಗ ಎಂದು ಭಾವಿಸಿದ್ದರು. ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿದೆ. ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ನೋಡಿದ ಜನ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಚಿತ್ರವನ್ನು ಜಗದೀಶ್ ಅಮೀನ್ ನಡುಬೈಲ್ ಅವರು ನಿರ್ಮಾಣ ಮಾಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದಾರೆ. ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದಾರೆ. ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ಮುಖ್ಯ ಭೂಮಿಕೆಯಲ್ಲಿದ್ದು, ರವಿ ಸ್ನೇಹಿತ್, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮ ನಗರ, ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ, ರಂಜನ್ ಬೋಳೂರು ಸಹಿತ ಹಲವು ಕಲಾವಿದರು ಅಭಿನಯಿಸಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ನೀಡಿದ್ದಾರೆ. ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣ ಚಿತ್ರಕ್ಕಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ ಎಂದರು.
ಚಿತ್ರದ ಪಾತ್ರದಲ್ಲಿ ಧರ್ಮ ದೈವದ ಚಿತ್ರದ ಕಲಾವಿದ್ದರೂ ಇದ್ದರೂ ಶೇ.80ರಷ್ಟು ಹೊಸ ಕಲಾವಿದರು ಈ ಚಿತ್ರದಲ್ಲಿ ಪಾತ್ರ ಮಾಡಿದ್ದಾರೆ. ಅದರಲ್ಲೂ ಪುತ್ತೂರು ದರ್ಬೆಯ ಧನ್ಯ ಪೂಜಾರಿ ಮತ್ತು ಪ್ರಗತಿಯಲ್ಲಿ ಉದ್ಯೋಗದಲ್ಲಿರುವ ನಿಶ್ಚಿತಾ ಪಾತ್ರ ನೀಡಿದ್ದಾರೆ ಎಂದು ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದರು.
ಊರಿನ ಪರಿಸರದ ಹೊಸ ಮುಖದ ಕಲಾವಿದರಿಗೆ ಪಾತ್ರ ನೀಡಿದ್ದೇವೆ. ಈಶ್ವಮಂಗಲದ ದೇಲಂಪಾಡಿ ಕರ್ನೂರು, ನಿಲೇಶ್ವರ ಮತ್ತು ಲೋಕಲ್‌ನಲ್ಲಿ ಚಿತ್ರಿಕರಣ ಮಾಡಿದ್ದೇವೆ. ಸುಮಾರು 28 ದಿನದಲ್ಲಿ ಚಿತ್ರ ಪೂರ್ಣಗೊಂಡಿದೆ. ಯಕ್ಷಗಾನದ ಭಾಗವತ ಸತೀಶ್ ಪಟ್ಲ ಅವರ ಧ್ವನಿಯ ಸಂಗೀತ ಬಹಳಷ್ಟು ಪ್ರೇಕ್ಷಕರಿಗೆ ಮುದ ನೀಡಲಿದೆ ಎಂದು ನಿತಿನ್ ರೈ ಕುಕ್ಕುಳ್ಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕಲಾವಿದರಾದ ರವಿ ಸ್ನೇಹಿತ್, ನಾಯಕಿ ನಟಿ ಧನ್ಯ ಪೂಜಾರಿ, ಛಾಯಾಗ್ರಹಣ ಮಾಡಿದ ಅರುಣ್ ರೈ ಪುತ್ತೂರು, ಚಿತ್ರದ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ ಉಪಸ್ಥಿತರಿದ್ದರು.

