ಉಜಿರೆ: (ಜು.10) ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಕೊಟ್ಟ ಮಹತ್ತ್ವದಷ್ಟು ಬೇರೆ ಯಾವ ಸಂಸ್ಕೃತಿಯು ಕೊಡಲಿಲ್ಲ. ವೇದಗಳು , ರಾಮಾಯಣ , ಮಹಾಭಾರತ ಇತ್ಯಾದಿ ಗ್ರಂಥಗಳು ಮೂಡಿಬರಲು ಕಾರಣ ಭಾರತೀಯರು ಗುರುವಿಗೆ ಕೊಟ್ಟ ಸ್ಥಾನದಿಂದ. ಎಲ್ಲರ ಜೀವನದಲ್ಲೂ ಗುರುವಿನ, ಶಿಕ್ಷಕನ ಪಾತ್ರ ಮಹತ್ವದ್ದಾಗಿರುತ್ತದೆ. ಎಲ್ಲದಕ್ಕಿಂತಲೂ ಎಲ್ಲರಿಗೂ ಅರಿವೇ ಒಂದು ದೊಡ್ಡ ಗುರು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್. ಬಿ. ಇವರು ಹೇಳಿದರು.

ಇದನ್ನೂ ಓದಿ: 🛑Ullala: ತಾನು ಕೆಲಸ ಮಾಡುತ್ತಿದ್ದ ಟೈಲರಿಂಗ್ ಶಾಪ್‌ನಲ್ಲಿಯೇ ಕುಸಿದು ಬಿದ್ದು ನವವಿವಾಹಿತ ಸಾವು
ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಆಯೋಜಿಸಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗುರುಪೂರ್ಣಿಮಾ ವಿಷಯವಾಗಿ ರಚಿಸಿದ ಭಿತ್ತಿಪತ್ರಿಕೆಯನ್ನು ಅನಾವರಣ ಮಾಡಿದರು.
ಸಂಸ್ಕೃತ ಸಂಘದ ಅಧ್ಯಕ್ಷೆ ಹಂಸಿನಿ ಭಿಡೆ ಹಾಗೂ ಅಂತರಾಧ್ಯಯನ ವೃತ್ತಮ್ ಇದರ ಪ್ರಧಾನ ಸಂಯೋಜಕಿ ಅಂಜನಾ ಇವರ ನೇತೃತ್ವದಲ್ಲಿ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ಎಲ್ಲ ಉಪನ್ಯಾಸಕರಿಗೆ ಶುಭಾಶಯ ಪತ್ರ ನೀಡಿದರು.


ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿ , ನಿರೂಪಿಸಿದರು. ಹಂಸಿನಿ ಭಿಡೆ ವಂದಿಸಿದರು.

