ಉಜಿರೆ:(ಜು.11) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿಂದಿ ಸಂಘದ 2025-26ನೇ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ಯುವ ಪತ್ರಕರ್ತ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಮೃದುಲಾ ಚಿಪ್ಳೂಣ್‌ಕರ್ ಅವರು ಉದ್ಘಾಟಿಸಿದರು.

ಇದನ್ನೂ ಓದಿ: 🟢ಮುಂಡಾಜೆ: ಮುಂಡಾಜೆ ಪ್ರೌಢಶಾಲೆಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಅವರು ಮಾತನಾಡುತ್ತಾ ಕಾಲೇಜಿನ ಭಾಷಾ ಸಂಘಗಳು ವಿದ್ಯಾರ್ಥಿಗಳ ಸೃಜನಾತ್ಮಕ ಹೊರ ತರುವ ಕೆಲಸ ಮಾಡುತ್ತ ವೆ. ವಿದ್ಯಾರ್ಥಿಗಳು ಹಿಂದಿಯನ್ನು ಕಲಿತರೆ ಭಾರತದಾದ್ಯಂತ ಉತ್ತಮ ಅವಕಾಶಗಳಿವೆ. ನಮ್ಮ ದೇಶ ವಿಶ್ವಮಟ್ಟದಲ್ಲಿ ಗುರುತಿಸಲು ಹಿಂದಿ ಭಾಷೆಯೂ ಒಂದು ಕಾರಣ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ. ಅವರು ಮಾತನಾಡಿ ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಭವ್ಯ ಸಂಸ್ಕೃತಿ, ಇತಿಹಾಸ ಇರುತ್ತದೆ. ಈ ನಿಟ್ಟಿನಲ್ಲಿ ಹಿಂದಿ ಭಾಷೆಯೂ ಕೂಡಾ ಸುಸಂಸ್ಕೃತ ಭಾಷೆ ಎನ್ನುತ್ತಾ ಹಿಂದಿ ಸಂಘಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ಹಿಂದೀ ವಿಭಾಗದ ಮುಖ್ಯಸ್ಥ ನಾಗರಾಜ್ ಪಿ. ಭಂಡಾರಿ ಹಾಗೂ ಹಿಂದೀ ಪ್ರಾಧ್ಯಾಪಕರಾದ ಡಾ. ಫ್ಲಾವಿಯಾ ಪೌಲ್ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀರಕ್ಷಾ, ರೀತಿಕಾ, ಆಶಿಕಾ, ಭವಿಷ್ಯರಾಣಿ ಅವರುಗಳು ಕಾರ್ಯಕ್ರಮ ನಿರೂಪಿಸಿದರು.
