ಕಳಿಯ:(ಜು.11) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗುತ್ತಿರುವ ಯೋಗ ಶಿಬಿರದಲ್ಲಿ ಶ್ರೀ ಗುರು ಪೂರ್ಣಿಮೆ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: 🟣ಬೆಳ್ತಂಗಡಿ : ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು
ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ ಎಂಬಂತೆ ಭಗವಂತನ ಇನ್ನೊಂದು ರೂಪವಾಗಿ ಕಾಣಿಸಿಕೊಂಡ ವ್ಯಾಸ ಮಹರ್ಷಿಗಳು ಅಖಂಡವಾದ ಜ್ಞಾನದ ರಾಶಿಯನ್ನು ನಾಲ್ಕು ವೇದಗಳಾಗಿ ವಿಂಗಡಿಸಿದಲ್ಲದೆ 18 ಪುರಾಣ, ಉಪ ಪುರಾಣ ಮತ್ತು ಮಹಾಭಾರತ ಕೃತಿಯನ್ನು ರಚಿಸಿ ಎಲ್ಲರಿಗೂ ಜೀವನದ ಮೌಲ್ಯಗಳನ್ನು ಬೋಧಿಸಿದ ಮಹಾನ್ ಗುರುಗಳೆಂದು ಯೋಗ ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ತಿಳಿಸಿದರು.

ಗುರು ಪೂರ್ಣಿಮೆಯ ಬಗ್ಗೆ ಯೋಗಬಂಧು ಶುಭಮಂಗಳ ಮಾತನಾಡಿ ಭಾರತಮಾತೆಯನ್ನು ಗುರುವಾಗಿ ಪೂಜಿಸುವ ಮಹತ್ವವನ್ನು ತಿಳಿಸಿದರು.
ಅಮೃತವಚನ,ಪಂಚಾಂಗ ಪಠಣ, ಯೋಗ ಪ್ರಾತ್ಯಕ್ಷಿಕೆ, ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಸುಕೇಶ್, ಸಂಚಾಲಕರಾದ ವಿಜಯ, ವರದಿ ಪ್ರಮುಖ ಕೇಶವ, ಅಶೋಕ, ವಸಂತ, ಶಿವಣ್ಣ, ರತ್ನಾಕರ, ಸತೀಶ್, ರಮೇಶ್, ಗಣೇಶ್, ಹರೀಶ, ವಿಜಯ, ದಿವಾಕರ, ಶ್ಯಾಮಣ್ಣ, ಪದ್ಮಲತಾ, ಅರುಣಾ, ಭಾರತಿ, ಕಾವ್ಯ, ಮೀರಾ, ಧರಿತ್ರಿ ಭಾಗವಹಿಸಿದ್ದರು.


