Fri. Jul 11th, 2025

ಕೊಯ್ಯೂರು : ಭಾರತೀಯ ಜನತಾ ಪಕ್ಷದ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಯಕ್ಷಗಾನ ಗುರುಗಳಾದ ವಿಶ್ವನಾಥ ಗೌಡ ಪಾಂಬೇಲು ರವರಿಗೆ ಗುರುವಂದನೆ ಕಾರ್ಯಕ್ರಮ

ಕೊಯ್ಯೂರು:(ಜು.11) ಭಾರತೀಯ ಜನತಾ ಪಕ್ಷದ ವತಿಯಿಂದ ಗುರು ಪೂರ್ಣಿಮೆಯ ಭಾಗವಾಗಿ ಕೊಯ್ಯೂರು ಗ್ರಾಮದ 157ನೇ ಬೂತ್ ನಲ್ಲಿ ಯಕ್ಷಗಾನ ಗುರುಗಳಾದ ಶ್ರೀಯುತ ವಿಶ್ವನಾಥ ಗೌಡ ಪಾಂಬೇಲು ರವರಿಗೆ ಗುರುಪೂರ್ಣಿಮೆ ದಿನ ಗುರುವಂದನೆ ಕಾರ್ಯಕ್ರಮ ನೆರವೇರಿಸಲಾಯಿತು.

ಇದನ್ನೂ ಓದಿ: 🛑19 ವರ್ಷದ ಯುವಕನ ಜೊತೆ ಹೆಂಡತಿಯ ಲವ್ವಿಡವ್ವಿ

ಶ್ರೀಯುತರು ಮೊದಲ ಬಾರಿಗೆ 1986 ರಲ್ಲಿ ಧರ್ಮಸ್ಥಳದ ಲಲಿತಾ ಕಲಾಭವನದಲ್ಲಿ ಯಕ್ಷಗಾನ ಶಿಕ್ಷಣ ಪೂರ್ಣಗೊಳಿಸಿ, ನಂತರ 2004 ರಿಂದ ಸ್ಥಳೀಯ ಶಾಲಾ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಾ ತಮ್ಮ ಯಕ್ಷ ಸೇವೆಯನ್ನು ಪ್ರಾರಂಭಿಸಿದರು.. 2018ರ ಕೊರೊನಾ ಮಹಾಮಾರಿಯ ವರೆಗೂ ಹಲವಾರು ಮಕ್ಕಳಿಗೆ ಯಕ್ಷ ಗುರುವಾಗಿ ಸೇವೆ ನೀಡುತ್ತಾ ಬಂದಿರುತ್ತಾರೆ. ಈ ಎಲ್ಲಾ ಸಂಗತಿಗಳನ್ನೂ ಮನಗೊಂಡು ಶ್ರೀಯುತರನ್ನು ಗುರು ಪೂರ್ಣಿಮೆಯ ದಿನದಂದು ಕಾರ್ಯಕರ್ತರ ಸಮ್ಮುಖದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ದಲ್ಲಿ ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ಶ್ರೀಯುತ ತಾರಾನಾಥ ಗೌಡ ಮೇಗಿನಬಜಿಲ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಹರೀಶ್ ಗೌಡ ಬಜಿಲ, ಕೊಯ್ಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಡೆಂಬುಗ, ಕಾರ್ಯಕರ್ತರಾದ ಮೋಹನದಾಸ್ ಬಜಿಲ, ಶೇಖರ ಗೌಡ ಕೋರಿಯಾರು ಇವರುಗಳು ಉಪಸ್ಥಿತರಿದ್ದರು. ಶ್ರೀಯುತ ದಾಮೋದರ ಗೌಡ ಬೆರ್ಕೆ ಇವರು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿ, ಭರತ್ ಡೆಂಬುಗ ವಂದಿಸಿದರು.

Leave a Reply

Your email address will not be published. Required fields are marked *