Sat. Jul 12th, 2025

Belthangady: ಬುದ್ಧ ಗುರುಪೂರ್ಣಿಮೆಯ ಪ್ರಯುಕ್ತ ಹಣ್ಣಿನ ಗಿಡ ನೆಟ್ಟು ಸಂಭ್ರಮ

ಬೆಳ್ತಂಗಡಿ:(ಜು.11) ಬಂದಾರು ಗ್ರಾಮದ ಸಿದ್ದಾರ್ಥ ಕಲಿಕಾ ಕೇಂದ್ರ ಪುನರಡ್ಕ ಕಾಲೋನಿಯ ಪರಿಸರದ ಆಟದ ಮೈದಾನ ಮತ್ತು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಬುದ್ದ ಗುರು ಪೂರ್ಣಿಮೆಯ ದಿನದಂದು ಗಿಡಗಳನ್ನು ನೆಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.

ಇದನ್ನೂ ಓದಿ: ⭕ಗುರುವಾಯನಕೆರೆ: ದಿನಸಿ ಅಂಗಡಿಯ ಎದುರಿನಲ್ಲಿದ್ದ ಜಾಹೀರಾತು ಬ್ಯಾನರ್ ಗೆ ಬೆಂಕಿ ಹಚ್ಚಿ ಪರಾರಿ


ಹಲಸು, ಪೇರಳೆ, ಸೀತಾಫಲ ಇನ್ನಿತರ ಸಸ್ಯಗಳನ್ನು ನೆಟ್ಟು ಧಮ್ಮ ದಿವಸದ ಶುಭಾಶಯಗಳನ್ನು ಹಂಚಲಾಯಿತು.
ತಾವೆಲ್ಲರೂ ಶ್ರದ್ಧೆ ಶೀಲ ದೊಂದಿಗೆ ಧಮ್ಮದಲ್ಲಿ ಬೆಳೆಯಿರಿ ಸುಖಃ ಶಾಂತಿಯನ್ನು ನಿಮ್ಮದಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಶ್ರದ್ಧಾ ಜಾಗೃತಿ ಮೂಡಿಸಲಾಯಿತು.


ಕಾಲೋನಿಯ ಸದಸ್ಯರುಗಳಾದ ಪಿ ಎಸ್ ಶ್ರೀನಿವಾಸ್, ಕೃಷ್ಣಪ್ಪ, ಸುಂದರ ರಮೇಶ, ಮೀನಾಕ್ಷಿ, ಭಾಗೀರಥಿ, ಗಣೇಶ, ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *