Sat. Jul 12th, 2025

Guruvayankere: ದಿನಸಿ ಅಂಗಡಿಯ ಎದುರಿನಲ್ಲಿದ್ದ ಜಾಹೀರಾತು ಬ್ಯಾನರ್ ಗೆ ಬೆಂಕಿ ಹಚ್ಚಿ ಪರಾರಿ – ಆರೋಪಿಯ ಬಂಧನ

ಗುರುವಾಯನಕೆರೆ:(ಜು.11) ದಿನಸಿ ಅಂಗಡಿಯ ಎದುರಿನಲ್ಲಿರಿಸಿದ ಜಾಹೀರಾತು ಬ್ಯಾನರ್ ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಜು.10ರಂದು ನಡೆದಿದೆ.

ಇದನ್ನೂ ಓದಿ: ☘ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ, ಮಾಜಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ರವರನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ

ಸಾಲವನ್ನು ಹಿಂತಿರುಗಿಸಲು ತಿಳಿಸಿದ ಎಂಬ ಕಾರಣಕ್ಕಾಗಿ ಅಂಗಡಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.


ಘಟನೆಯ ವಿವರ:

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ದಿನಸಿ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫಲಕದ ಬ್ಯಾನರ್ ಗೆ ಜು. 10ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ವ್ಯಕ್ತಿಯೊರ್ವ ಬೆಂಕಿ ಹಚ್ಚಿ ಓಡಿಹೋಗಿದ್ದ.

ಅಂಗಡಿಯವರು ಬೆಳಗ್ಗೆ ಬಂದು ನೋಡಿದಾಗ ಘಟನೆ ತಿಳಿದು ಬಂದಿದೆ. ಸಿ.ಸಿ. ಕ್ಯಾಮರಾ ಪರಿಶೀಲನೆ ನಡೆಸಿದಾಗ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಂಗಡಿ ಮಾಲಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು.


ಬೆಂಕಿ ಹಚ್ಚಿದ ಆರೋಪಿ ಬೆಳ್ತಂಗಡಿ ತಾಲೂಕಿನ ಬಳಂಜದ ನಿವಾಸಿ ಉಮೇಶ್ ಎಂಬವನಾಗಿದ್ದು, ಬೆಳ್ತಂಗಡಿ ಪೊಲೀಸರು ಜು. 10ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆ ಆರೋಪಿ ಹೊಟೇಲ್ ನಡೆಸುತ್ತಿದ್ದು.
ಇದೇ ಅಂಗಡಿಯಿಂದ ಸಾಲವಾಗಿ ದಿನಸಿ ಸಾಮಾಗ್ರಿ ಖರೀದಿಸಿದ ಹಣ ಬಾಕಿ ಇತ್ತು. ಈ ಹಣವನ್ನು ಅಂಗಡಿ ಮಾಲೀಕ ಜು. 9ರಂದು ಕರೆ ಮಾಡಿ ಕೊಡುವಂತೆ ಕೇಳಿದ್ದರು.
ಇದರಿಂದ ಕೋಪಗೊಂಡು ಬೆಂಕಿ ಹಚ್ಚಿರುವುದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಬೆಂಕಿ ಹಚ್ಚಿದಾಗ ಪಕ್ಕದಲ್ಲಿ ಕಾರು ನಿಲ್ಲಿಸಲಾಗಿದ್ದು, ಅದಲ್ಲದೇ ಅಂಗಡಿಗೆ ಬೆಂಕಿ ತಗುಲದೆ ಯಾವುದೇ ದೊಡ್ಡ ಅನಾಹುತ ಉಂಟಾಗಿಲ್ಲ ಎಂದು ಅಂಗಡಿ ಮಾಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *