ಧರ್ಮಸ್ಥಳ:(ಜು.12) ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆಯು ನಡೆಯಿತು.

ಶ್ರೀ ಧ.ಮಂ.ಎಜುಕೇಶನ್ ಸೊಸೈಟಿ ಉಜಿರೆ ಇಲ್ಲಿಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾದ ಶ್ರೀ ಧನ್ಯ ಕುಮಾರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪೋಷಕರನ್ನು ಕುರಿತು ಮಾತನಾಡಿದ ಇವರು ಮಕ್ಕಳಿಗೆ ಮನೆಯಿಂದಲೇ ಶಿಸ್ತಿನ ಬಗ್ಗೆ ಪಾಠವನ್ನು ಹೇಳಬೇಕು. ಪ್ರತಿಯೊಂದು ಮಗುವಿನ ಚಲನ ವಲನಗಳನ್ನು ಅರಿತು ಸೂಕ್ತ ರೀತಿಯ ಮಾರ್ಗದರ್ಶನಗಳನ್ನು ನೀಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

ಶ್ರೀ ಜೋಸೆಫ್ ಇವರು ಶಾಲಾ ಸಮಗ್ರ ಮಾಹಿತಿಯನ್ನು ನೀಡಿದರು. 2025-26ನೇ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾದ ಶ್ರೀ ರಾಜೇಶ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜ್ ರಜಪೂತ್, ಹಿರಿಯ ಶಿಕ್ಷಕರಾದ ಶ್ರೀ ಜೋಸೆಫ್, ಶ್ರೀಮತಿ ಶ್ರೀಜಾ ಎ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು .ಶ್ರೀಮತಿ ಪೂರ್ಣಿಮಾ ಕೆ. ಎಂ ನಿರೂಪಿಸಿದ ಈ ಕಾರ್ಯಕ್ರಮಕ್ಕೆ ಶ್ರೀಮತಿ ಕಾವ್ಯ ಸ್ವಾಗತಿಸಿ ಶ್ರೀಮತಿ ಉಷಾ ಇವರು ಧನ್ಯವಾದವಿತ್ತರು.
