Sat. Jul 12th, 2025

Ujire: ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ.ಡಿ ರವರಿಗೆ ಪಿಎಚ್‌ಡಿ ಪದವಿ

ಉಜಿರೆ:(ಜು.12) ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್.ಡಿ.ಎಂ ಪ.ಪೂ.ಕಾಲೇಜಿನಲ್ಲಿ ಅರ್ಥ ಸಂಘ ಉದ್ಘಾಟನೆ


ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತ್ರ ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ಜುಲೈ 11 2025 ರಂದು ಪಿಎಚ್‌ಡಿ (PhD) ಪದವಿ ನೀಡಲಾಯಿತು.

ಉಜಿರೆಯ ಲಲಿತನಗರದ ನಿವಾಸಿಯಾಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಧರ್ಮಪತ್ನಿ.

Leave a Reply

Your email address will not be published. Required fields are marked *