ಉಜಿರೆ:(ಜು.೧೨) ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಯೋಗ ದಿನದ ಪ್ರಯುಕ್ತ ಮೈತ್ರೇಯಿ ವಿದ್ಯಾರ್ಥಿನಿ ನಿಲಯದಲ್ಲಿ ಯೋಗ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಇದನ್ನೂ ಓದಿ: ⭕ಬೆಳಾಲು : ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶ#ವ ಕೆರೆಯಲ್ಲಿ ಪತ್ತೆ
ಯೋಗ ಶಿಬಿರ ನಡೆಸಿಕೊಟ್ಟ ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಪ್ರಾಖ್ಯಾ ರವರು ಮಾತನಾಡಿ ” ಯೋಗ ನಮ್ಮ ಅರೋಗ್ಯವಂತ ಜೀವನಕ್ಕೆ ಸಹಕಾರಿ.ವಿದ್ಯಾರ್ಥಿಗಳು ದಿನ ನಿತ್ಯ ಯೋಗ ಮಾಡಿದಾಗ ಓದಿನ ಕಡೆಗೆ ಏಕಾಗ್ರತೆ ಸಾಧಿಸಲು ಸಾಧ್ಯ “ಎಂದು ಹೇಳಿದರು.

ವೇದಿಕೆಯಲ್ಲಿ ಉಜಿರೆ ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ರೈ , ನಿಲಯಪಾಲಿಕೆಯರಾದ ಹೇಮಾವತಿ, ಸುಜಿತಾ ಉಪಸ್ಥಿತರಿದ್ದರು. ಎನ್ ಎಸ್ ಎಸ್ ನಾಯಕಿ ರಾಶಿಕ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.


