ಬೆಳ್ತಂಗಡಿ :(ಜು.13) ಲಾಯಿಲ ಗ್ರಾಮದ ಕಕ್ಕೇನ ಎಂಬಲ್ಲಿ ತೋಡಿನ ಬದಿಯಲ್ಲಿ ಜುಲೈ 12 ರಂದು ಸುಮಾರು 11 ಗಂಟೆ ಹೊತ್ತಿಗೆ 35 ರಿಂದ 45 ವರ್ಷದ ಪ್ರಾಯದ ಅಪರಿಚಿತ ಗಂಡಸು ಅಸ್ವಸ್ಥ ರೀತಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತಪಟ್ಟ ವ್ಯಕ್ತಿಯ ಎತ್ತರ 5.5, ಗೋದಿ ಮೈಬಣ್ಣ, ತಲೆಯಲ್ಲಿ ಒಂದೂವರೆ ಇಂಚು ಉದ್ದ ಕೂದಲು, ಕಪ್ಪು ಗಡ್ಡ, ದೃಢ ಕಾಯ,ದುಂಡು ಮುಖ ಬಲಭಾಗದ ಎದೆಯಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು, ಕಂದು ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.


ಈ ವ್ಯಕ್ತಿಯ ಗುರುತು ಬಲ್ಲವರು ಬೆಳ್ತಂಗಡಿ ಪೊಲೀಸ್ ಠಾಣೆಯ 08256-232093/ 9480805370 ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

