ಬಂಟ್ವಾಳ :(ಜು.13) ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಆಗಸ್ಟ್ 10 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯುವ ಆಟಿಡೊಂಜಿ ಕೂಟ ಸಮಾರಂಭದ ಆಮಂತ್ರಣ ಪತ್ರವನ್ನು ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: 🟣ಕನ್ಯಾಡಿ: ಸೇವಾಭಾರತಿಯಿಂದ ಕೇಂದ್ರ ಸಚಿವರ ಭೇಟಿ
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಮಧುಸೂದನ್ ಮದ್ವ, ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ,
ಕೋಶಾಧಿಕಾರಿ ನವೀನ್ ಪೂಜಾರಿ, ಸಂಚಾಲಕರಾದ ನವೀನ್ ಕಾರಾಜೆ, ಶೈಲಜಾ ಹರೀಶ್, ಸಾಂಸ್ಕೃತಿಕ ನಿರ್ದೇಶಕ ಶೈಲೇಶ್ ಕುಚ್ಚಿಗುಡ್ಡೆ, ಸಲಹೆಗಾರ ರಾಮಚಂದ್ರ ಸುವರ್ಣ ತುಂಬೆ ಉಪಸ್ಥಿತರಿದ್ದರು.



