ಬೆಳ್ತಂಗಡಿ:(ಜು.13) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ 2೦24 -25 ನೇ ಸಾಲಿನ ಮಹಾಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು.

ಇದನ್ನೂ ಓದಿ: ⭕ಮುಲ್ಕಿ : ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತರಾದ ಡಾ.ಮೋಹನ್ ಅಳ್ವ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ಗೌರವಧ್ಯಕ್ಷರು ಹಾಗೂ ಶಾಸಕರಾದ ಮಾನ್ಯ ಶ್ರೀ ಹರೀಶ್ ಪೂಂಜರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗೆ ನೀಡುತ್ತಿರುವ ಸಹಕಾರ ಹಾಗೂ ಸಲಹೆ ಸೂಚನೆ ಗಳಿಗೆ ಅವರನ್ನು ಸ್ಥಳೀಯ ಸಂಸ್ಥೆಯಿಂದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಡಾ. ಮೋಹನ್ ಆಳ್ವಾರವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರಮೀಳ ವರಿಂದ ವರದಿ ಮಂಡನೆಯಾಗಿ ಮಂಜೂರಾತಿ ಪಡೆದುಕೊಂಡು, ಕೋಶಾಧಿಕಾರಿ ಬೆಳಿಯಪ್ಪ ಕೆ ಯವರಿಂದ ಲೆಕ್ಕಪತ್ರ ಮಂಡನೆಯಾಗಿ ಮಂಜೂರಾತಿ ಪಡೆದುಕೊಂಡಿತು. ಹೊಸದಾಗಿ ತರಬೇತಿಗೊಂಡು ಆಗಮಿಸಿದ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ ರೋವರ್ ರೇಂಜರ್ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸಲಾಯಿತು.

ಜಿಲ್ಲಾ ಕೋಶಾಧಿಕಾರಿ ನವೀನ್ ಅಂಬೂರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ಸಂಸ್ಥೆಯ ಅಧ್ಯಕ್ಷರಾದ ಪದ್ಮ ಕುಮಾರ್, ಜಿಲ್ಲಾ ಸಹಾಯಕ ಆಯುಕ್ತರುಗಳಾದ ಬಿ ವಿಠಲ್ ಶೆಟ್ಟಿ, ಬಿ ಸೋಮಶೇಖರ್ ಶೆಟ್ಟಿ, ಉಪಾಧ್ಯಕ್ಷರಾದ ಸುಲೋಚನಾ, ಕಾರ್ಯದರ್ಶಿ ಪ್ರಮೀಳಾ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಕೋಶಾಧಿಕಾರಿ ಬೆಳಿಯಪ್ಪ ಕೆ ರೋವರ್ ಸ್ಕೌಟ್ ಲೀಡರ್ ವಾಣಿ ಪದವಿಪೂರ್ವ ಕಾಲೇಜ್ ಹಾಗೂ ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಯವರು ಶಿಕ್ಷಕ ಶಿಕ್ಷಕಿಯರಿಗೆ ಸ್ಕೌಟ್ಸ್ ಗೈಡ್ಸ್ ನ ಬಗ್ಗೆ ಮಾರ್ಗದರ್ಶನ ನೀಡಿದರು.


ನಿರೂಪಣೆ ಯಲ್ಲಿ ಲಕ್ಷ್ಮೀಶ ರೋವರ್ ಸ್ಕೌಟ್ ಲೀಡರ್ ಎಸ್ ಡಿ ಎಂ ಪದವಿಪೂರ್ವ ಕಾಲೇಜು ಉಜಿರೆ ನೆರವೇರಿಸಿ , ಕಾರ್ಯಕ್ರಮವನ್ನು ಪದ್ಮಕುಮಾರ್ ಸ್ವಾಗತಿಸಿ ಪ್ರಮೀಳಾ ವಂದಿಸಿದರು.
