Mon. Jul 14th, 2025

Nelyadi: ಗುಂಡ್ಯ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ನೆಲ್ಯಾಡಿ: ಶಿರಾಡಿ ಗ್ರಾಮದ ಗುಂಡ್ಯ ಪ್ರದೇಶದ ಗುಂಡ್ಯಹೊಳೆಯಲ್ಲಿ ಜು.13ರಂದು ಅಪರಾಹ್ನದ ವೇಳೆಗೆ ಒಂದು ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ಹೊಳೆಯಲ್ಲಿ ತೇಲಿಬಂದ ಶವ ಪೊದರಿನ ನಡುವೆ ಸಿಲುಕಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪುತ್ತೂರಿನ ಅಗ್ನಿಶಾಮಕ ದಳದ ಸಹಾಯದಿಂದ ಶವವನ್ನು ಹೊಳೆ ನೀರಿನಿಂದ ಹೊರತೆಗೆದರು. ಮೃತ ವ್ಯಕ್ತಿಯು ಸುಮಾರು 35 ವರ್ಷದ ಗಂಡಸಾಗಿದ್ದು, ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *