ಬಂಟ್ವಾಳ :(ಜು.15) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಹಾಗೂ ವಾರ್ಷಿಕ ಸಭೆ ಸೋಮವಾರ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಜರಗಿತು.

ಇದನ್ನೂ ಓದಿ: 🟢ಬೆಳ್ತಂಗಡಿ: ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ
ಜಿಲ್ಲಾ ನಿರ್ದೇಶಕರಾದ ದಿನೇಶ್. ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶೌರ್ಯ ತಂಡದ ಮೂಲಕ ಸಮಾಜ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಸದುಪಯೋಗ ಪಡೆದುಕೊಳ್ಳಿ, ಆ ಮೂಲಕ ತಮ್ಮ ತಮ್ಮ ಗ್ರಾಮದ ಆಪತ್ಕಾಲದ ಬಾಂಧವರಾಗಿ ಸಮಾಜದಲ್ಲಿ ಗುರುತಿಸುವಂತಹ ವ್ಯಕ್ತಿಗಳಾಗಿ ಎಂದರು.
ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ, ಶೌರ್ಯ ತಂಡದ ಸದಸ್ಯರುಗಳ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶೌರ್ಯ ಕಾರ್ಯಕ್ರಮಗಳ ಯೋಜನಾಧಿಕಾರಿ ಕಿಶೋರ್ ಕುಮಾರ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್ ಪೂಜಾರಿ, ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ವಲಯವಾರು ಪ್ರತಿನಿಧಿಗಳಾದ ಜಗದೀಶ್ ಆಚಾರ್ಯ, ಭಾಸ್ಕರ, ನಿಸಾರ್, ಪ್ರವೀಣ್, ಮೋಹನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತರಬೇತಿ ಹಾಗೂ ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ 8 ವಲಯಗಳ ಶೌರ್ಯ ಸಂಯೋಜಕರು, ಸ್ವಯಂಸೇವಕರು ಉಪಸ್ಥಿತರಿದ್ದರು.
ಶೌರ್ಯ ತಂಡದ ಸದಸ್ಯ ಮಾಧವ ಸ್ವಾಗತಿಸಿ, ರತ್ನ ವಂದಿಸಿದರು. ಶೌರ್ಯ ಸಂಯೋಜಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು.

