Mon. Sep 1st, 2025

ಬೆಳ್ತಂಗಡಿ : ತಾಲೂಕು ಕಚೇರಿಯ ಪ್ರಥಮದರ್ಜೆ ಸಹಾಯಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ :(ಜು.15) ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕ ಸತೀಶ್(46) ಮೂಲತಃ ಹಾಸನ ಜಿಲ್ಲೆಯವರು. ಜುಲೈ 15 ರಂದು ಬೆಳಗ್ಗೆ ಸ್ನಾನ ಮಾಡಿ ವಾಪಸ್ ಬರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಎಂದಿನಂತೆ ಬೆಳಗ್ಗೆ ಸ್ನಾನ ಮಾಡಿ ವಾಪಸ್ ಬರುವಾಗ ಕುಸಿದು ಬಿದ್ದ ಸತೀಶ್‌ ಅವರನ್ನು ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *