Tue. Jul 15th, 2025

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಯಾಂತ್ರೀಕೃತ ಭತ್ತದ ನಾಟಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ:(ಜು.15)ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬೆಳ್ತಂಗಡಿ, ದ.ಕ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಯಾಂತ್ರೀಕೃತ ಭತ್ತದ ನಾಟಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಬೀಜೋತ್ಪಾದನಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆಸಲಾಯಿತು.

ಇದನ್ನೂ ಓದಿ: 🟢ಕನ್ಯಾಡಿ: ಸೇವಾನಿಕೇತನಕ್ಕೆ ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಭೇಟಿ

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಕೆ.ಡಿ.ಆರ್.ಡಿ.ಪಿ.‌ ಬಿ.ಸಿ ಟ್ರಸ್ಟ್ ಕೇಂದ್ರ ಕಚೇರಿ ಧರ್ಮಸ್ಥಳ, ಕೃಷಿ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ನೆರವೇರಿಸಿದರು. ಇವರು ಭತ್ತ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಯುವ ಜನತೆ ಭತ್ತ ಕೃಷಿಯತ್ತ ಆಕರ್ಷಣೆಯಾಗುತ್ತಿದ್ದು,ಇಂದು ಭತ್ತ ಕೃಷಿ ಉಳಿಯಲು ಯಂತ್ರೋಪಕರಣವೇ ಮೂಲ ಆಧಾರವಾಗಿದೆ. ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸಿ ಇಂದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು,ಕ್ಲಪ್ತ ಸಮಯದಲ್ಲಿ ಉಳುಮೆ ನಾಟಿ,ಕಟಾವಿಗೆ ಯಂತ್ರಗಳ ಪೂರ್ಣವಾದ ಬಳಕೆ ಮಾಡುತ್ತಿರುವುದರಿಂದ ಭತ್ತ ಕೃಷಿಯು ಅತ್ಯಂತ ಸುಲಭದ ಕೃಷಿಯಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಸಂಪೂರ್ಣ ಸಹಕಾರದೊಂದಿಗೆ ಪರಮಪೂಜ್ಯ ಡಾ. ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಕರ್ನಾಟಕ ರಾಜ್ಯದ್ಯಂತ 1,00,254 ಎಕ್ರೆ ಪ್ರದೇಶಗಳಲ್ಲಿ ಸುಮಾರು 44119 ರೈತರಲ್ಲಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಇಲ್ಲಿಯವರೆಗೆ ಅನುಷ್ಠಾನಿಸಲಾಗಿದೆ. ಈ ವರ್ಷ 12000 ರೈತರಲ್ಲಿ 25000ಎಕ್ರೆ ಪ್ರದೇಶದಲ್ಲಿ ಯಾಂತ್ರಿಕೃತ ಭತ್ತ ಬೇಸಾಯ “ಯಂತ್ರಶ್ರೀ” ಅನುಷ್ಠಾನಿಸಲಾಗುತ್ತಿದೆ.
ಇಲ್ಲಿಯವರೆಗೆ ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಪೂರಕವಾಗಿ ರೈತರಿಗೆ ಇದರ ಬಗ್ಗೆ ಪೂರ್ಣವಾದ ಮಾಹಿತಿಯನ್ನು ನೀಡಲು 2320 ತರಬೇತಿಯನ್ನು ಆಯೋಜಿಸಿದ್ದು. ಯಾಂತ್ರಿಕೃತ ಭತ್ತ ಬೇಸಾಯವನ್ನು ಅತ್ಯುತ್ತಮವಾಗಿ ಮಾಡಿದಂತಹ ರೈತನ ಆ ಗದ್ದೆಗೆ 58398 ರೈತರಿಗೆ ಅಧ್ಯಯನ ಪ್ರವಾಸದ ಮೂಲಕವಾಗಿ ಅವರಿಗೆ ಆಯಾ ಜಮೀನಿನಲ್ಲಿ ಮಾಹಿತಿಯನ್ನು ನೀಡಲು ಅಧ್ಯಯನ ಪ್ರವಾಸವನ್ನು ಆಯೋಜಿಸಲಾಗಿದೆ.. ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಷ 372 ರೈತರಲ್ಲಿ 758 ಎಕ್ರೆಗಳಲ್ಲಿ ಯಾಂತ್ರಿಕೃತ ಭತ್ತ ಬೇಸಾಯ “ಯಂತ್ರಶ್ರೀ” ಅನುಷ್ಠಾನೀಸಲಾಗುತ್ತಿದೆ.

ರಾಜ್ಯಾದ್ಯಂತ ಕೃಷಿ ಯಂತ್ರಧಾರಿಯ ಮೂಲಕವಾಗಿ ರೈತರಿಗೆ ಯಂತ್ರಗಳನ್ನು ಕ್ಲಪ್ತ ಸಮಯಕ್ಕೆ ಒದಗಿಸಿಕೊಡುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಪ್ರಾತೇಕ್ಷಿಕೆ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೌಡ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೈತರು ಭತ್ತ ಕೃಷಿಗೆ ಒಲವನ್ನು ತೋರುತ್ತಿದ್ದು, ಯುವಜನತೆಯು ಕೂಡ ಇಂದು ಭತ್ತಕೃಷಿಯನ್ನು ಇರುವಂತಹ ಗದ್ದೆಗಳಲ್ಲಿ ಯಾಂತ್ರಿಕರಣದ ಮೂಲಕವಾಗಿ ಮಾಡುತ್ತಿದ್ದು,ಕೃಷಿ ಇಲಾಖೆಯಿಂದಲೂ ಸಂಪೂರ್ಣವಾದ ಸಹಕಾರವನ್ನು ರೈತರಿಗೆ ನೀಡುತ್ತಿದ್ದು,ರೈತರಿಗೆ ಭತ್ತದ ಬೀಜಗಳನ್ನು ಇಲಾಖೆಯಿಂದ ವಿತರಿಸಲಾಗುತ್ತಿದೆ. ಹೆಚ್ಚಿನ ಸವಲತ್ತುಗಳು ಕೃಷಿ ಇಲಾಖೆಯಿಂದ ಸಿಗುತ್ತಿದ್ದು ರೈತರು ಕೃಷಿ ಇಲಾಖೆಗೆ ಬಂದು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕ್ರಾಪ್ ಇನ್ಸೂರೆನ್ಸ್ ಈಗಾಗಲೇ ನೋಂದಾವಣೆಯನ್ನು ಮಾಡುತ್ತಿದ್ದು ಭತ್ತಕ್ಕೂ ಕೂಡ ಕ್ರಾಪ್ ಇನ್ಸೂರೆನ್ಸ್ ಮಾಡಿದಾಗ ಬೆಳೆಯಲ್ಲಿ ನಷ್ಟ ಆದಾಗ ಇದರ ಪ್ರಯೋಜನವನ್ನು ಪಡೆಯಬಹುದು. ಇದೀಗಾಗಲೇ ಬೆಳೆ ಸಮೀಕ್ಷೆಯನ್ನು ಮಾಡದೆ ಇರುವ ರೈತರು ತನ್ನ ಮೊಬೈಲಿನಲ್ಲಿಯೇ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಎಂದರು.

ಯಾಂತ್ರೀಕೃತ ಭತ್ತ ಕೃಷಿಕರಾದ ಪ್ರಾಂಸಿಸ್ ಮಿರಂದ ಮಾತನಾಡಿ, ನಾನು ಸುಮಾರು 52 ವರುಷದಿಂದ ಭತ್ತ ಕೃಷಿಯನ್ನು ತಂದೆಯ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದು, ಅವಾಗಿನ ಸಂದರ್ಭ ವರ್ಷಕ್ಕೆ 3 ಬೆಳೆಯನ್ನು ತೆಗೆಯುತ್ತಿದ್ದೆವು. ಆದರೆ ನನಗೆ ಭತ್ತ ಕೃಷಿಯಲ್ಲಿ ಕೂಲಿಯಲುಗಳ ಸಮಸ್ಯೆಯಾಗಿ ಭತ್ತ ಮಾಡುವುದನ್ನು ನಿಲ್ಲಿಸಬೇಕು ಎನ್ನುವ ಕಾಲಘಟ್ಟದಲ್ಲಿ ಯಂತ್ರಗಳ ಬಳಕೆಗಳನ್ನು ಭತ್ತ ಕೃಷಿಯಲ್ಲಿ ತಂದಿರುವ ಕಾರಣವಾಗಿ ಇಂದು ಭತ್ತ ಕೃಷಿಯಲ್ಲಿ ವರ್ಷಕ್ಕೆ 2 ಬೆಳೆಯನ್ನು ಇವತ್ತು ಕೂಡ ತೆಗೆಯಲು ಸಹಕಾರಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯಂತ್ರಗಳನ್ನು ಕ್ಲಪ್ತ ಸಮಯದಲ್ಲಿ ಕೃಷಿಯಂತ್ರಧರೆಯ ಮೂಲಕ ಒದಗಿಸಿ ನಮ್ಮ ರೈತರ ಮನೆ ಬಾಗಿಲಿಗೆ ಬಂದು ಉಚಿತವಾಗಿ ಮಾಹಿತಿಯನ್ನು ನೀಡುತ್ತಿರುವುದು ನಿಜಕ್ಕೂ ರೈತರ ಪಾಲಿಗೆ ಹೊಸ ಆಶಾಕಿರಣವಾಗಿದೆ ಈ ಯೋಜನೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬೆಳ್ತಂಗಡಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ವೀರಭದ್ರಪ್ಪ A.D, ಕೃಷಿ ಇಲಾಖೆ ಬೆಳ್ತಂಗಡಿಯ ಕೃಷಿ ಅಧಿಕಾರಿ ಗಣೇಶ್, ಬೆಳ್ತಂಗಡಿ ತಾಲೂಕು ಎಸ್.ಕೆ.ಡಿ.ಆರ್‌.ಡಿ.ಪಿ ಬಿ.ಸಿ ಟ್ರಸ್ಟ್‌ ನ ಯೋಜನಾಧಿಕಾರಿ ಯಶೋಧರ್, ಎಸ್.ಕೆ.ಡಿ.ಆರ್‌.ಡಿ.ಪಿ ಬಿ.ಸಿ ಟ್ರಸ್ಟ್‌ ಕೇಂದ್ರ ಕಚೇರಿ ಧರ್ಮಸ್ಥಳದ ಯೋಜನಾಧಿಕಾರಿ ಬಾಲಕೃಷ್ಣ, CHSC ಯೋಜನಾಧಿಕಾರಿ ಮೋಹನ್, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರು ಸೀತಾರಾಮ್ ಆರ್. ಬೆಳ್ತಂಗಡಿ, ತಾಂತ್ರಿಕ ಅಭಿಯಂತರರಾದ ಸುದರ್ಶನ್ , ಪ್ರಗತಿಪರ ಯಂತ್ರಶ್ರೀ ಕೃಷಿಕರು ಪ್ರವೀಣ್ ಮಲೆಬೆಟ್ಟು, ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್ , CHSC ಪ್ರಬಂಧಕರಾದ ಚೇತನ್ , ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಲಾರೆನ್ಸ್, ರತ್ನಮಾನಸದ ಪ್ರಬಂಧಕರಾದ ಯತೀಶ್ , ಯಾಂತ್ರೀಕೃತ ಭತ್ತ ಬೇಸಾಯವನ್ನು ಮಾಡುತ್ತಿರುವ ಆಯ್ದ ಕೃಷಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *