Tue. Jul 15th, 2025

Karkala: ಹಾಸ್ಟೆಲ್ ಗೋಡೆಯಲ್ಲಿ ಪ್ರಚೋದನಕಾರಿ ಬರವಣಿಗೆ – ವಿದ್ಯಾರ್ಥಿನಿ ಅರೆಸ್ಟ್..!

ಕಾರ್ಕಳ:(ಜು.15) ಕಾಲೇಜು ಮಹಿಳಾ ಹಾಸ್ಟೆಲ್‌ನ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ⭕ಪುತ್ತೂರು: ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ

ಮೇ 7 ರಂದು ಸಂಜೆ 6 ಗಂಟೆಗೆ ಹಾಸ್ಟೆಲ್‌ನ ಮೊದಲ ಹಂತದ ಶೌಚಾಲಯದ ಕೋಣೆಯ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಪ್ರಚೋದನಕಾರಿಯಾಗಿ ಬರೆಯಲಾಗಿದ್ದು, ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿತ್ತು.

ಈ ಬಗ್ಗೆ ನಿಟ್ಟೆ ಕಾಲೇಜಿನ ಮುಖ್ಯ ಮಹಿಳಾ ಹಾಸ್ಟೆಲ್‌ನ ಮ್ಯಾನೇಜ‌ರ್ ಅವರು ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು, ಆರೋಪಿಯಾದ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ನಿವಾಸಿ ಫಾತಿಮಾ ಶಬ್ದಾ (21) ಅವರನ್ನು ಜುಲೈ 14 ರಂದು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು.

Leave a Reply

Your email address will not be published. Required fields are marked *