ಕಾರ್ಕಳ :(ಜು.16) ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬುದು ಕನ್ನಡ ಗಾದೆಯಾಗಿದೆ. ಇದರ ಅರ್ಥವೇನೆಂದರೆ, ಗಂಡ ಮತ್ತು ಹೆಂಡತಿಯ ನಡುವಿನ ಜಗಳವು ಸಾಮಾನ್ಯವಾಗಿ ಊಟ ಮಾಡಿ ಮಲಗುವ ಮುಂಚೆಯೇ ಕೊನೆಗೊಳ್ಳುತ್ತದೆ. ಇದು ತಾತ್ಕಾಲಿಕ ಜಗಳ ಎಂದು ಸೂಚಿಸುತ್ತದೆ, ಮತ್ತು ಅದು ರಾತ್ರಿಯೊಳಗೆ ಪರಿಹಾರವಾಗುತ್ತದೆ ಎಂದು ಹೇಳುತ್ತದೆ.

ಇದನ್ನೂ ಓದಿ: 🟠ಮಂಗಳೂರು: ವಿಶ್ವದ ಪ್ರತಿಷ್ಠಿತ “ರೋಲ್ಸ್ ರಾಯ್ಸ್ ” ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ “ರಿತುಪರ್ಣ”
ಆದ್ರೆ ಇಲ್ಲೊಂದು ಭೀಕರ ಘಟನೆ ನಡೆದಿದೆ. ಹೆಂಡತಿಗೆ ಕತ್ತಿಯಿಂದ ಗಂಡ ಹಲ್ಲೆ ಮಾಡಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನದಲ್ಲಿ ನಡೆದಿದೆ. ಸುರೇಖಾ ಮೃತ ಮಹಿಳೆ. ಗೋಪಾಲಕೃಷ್ಣ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಜು. 15ರಂದು ಮಧ್ಯಾಹ್ನ ಹೆಂಡತಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸುರೇಖಾ ಅವರ ಮೈಯಿಂದ ರಕ್ತಬರುವುದನ್ನು ನೋಡಿ ಹೆದರಿ ಅಲ್ಲಿಂದ ಹೋದ ಗೋಪಾಲಕೃಷ್ಣ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


