Wed. Jul 16th, 2025

ಮಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಮಂಗಳೂರು (ಜು.16): ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಹಿನ್ನಲೆ ಪೊಲೀಸ್​ ಕಾನ್ಸ್​ಟೇಬಲ್​​ನನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಚಂದ್ರನಾಯಕ್ ಬಂಧಿತ ಆರೋಪಿ. ಇದೇ ಪ್ರಕರಣದಲ್ಲಿ ಪತ್ನಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್​ ಮಾಡುತ್ತಿದ್ದ ಗಂಡನನ್ನು ಕೂಡ ಬಂಧಿಸಲಾಗಿದೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್​ಗೆ ಮಹಿಳೆ ದೂರು ನೀಡಿದ್ದರು.

ಇದನ್ನೂ ಓದಿ: ⭕ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ

ನಡೆದದ್ದೇನು?
ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲ ವರ್ಷ ಆಗಿತ್ತು. ಪತ್ನಿಯ ಖಾಸಗಿ ವಿಡಿಯೋವನ್ನು ಪತಿ ಸೆರೆ ಹಿಡಿದಿದ್ದ. ಈ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್​​​ ಕೂಡ ಮಾಡುತ್ತಿದ್ದ. ತಾನು ಹೇಳಿದವರ ಜೊತೆ ಮಲಗಬೇಕು ಅಂತ ಟಾರ್ಚರ್ ಕೊಟ್ಟಿದ್ದ. ವಿಡಿಯೋ ಇಟ್ಟುಕೊಂಡು ಬೇರೆಯವರ ಹಾಸಿಗೆಗೆ ಪತ್ನಿಯನ್ನು ಆರೋಪಿ ಪತಿ ದೂಡಿದ್ದ. ಇದರಿಂದ ತುಂಬಾ ನೊಂದಿದ್ದ ಸಂತ್ರಸ್ತೆ ಪೊಲೀಸನ ಸಂಪರ್ಕ ಮಾಡಿದ್ದಾರೆ.

ಬೇರೆಯವರ ಮೂಲಕ ಕಾವೂರು ಪೊಲೀಸ್ ಚಂದ್ರನಾಯಕ್ ಪರಿಚಯವಾಗಿದೆ. ವಿಡಿಯೋ ಡಿಲೀಟ್ ಮಾಡಿಸುವಂತೆ ಚಂದ್ರನಾಯಕನಿಗೆ ಸಂತ್ರಸ್ತೆ ಮನವಿ ಮಾಡಿದ್ದರು. ಆ ಮೂಲಕ ಚಂದ್ರನಾಯಕ್ ತನ್ನ ಪೊಲೀಸ್ ಪವರ್ ಬಳಸಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದ. ಬಳಿಕ ದಂಪತಿ ನಡುವೆ ರಾಜಿ ಮಾಡಿಸಿದ್ದ.

ಈ ವೇಳೆ ಪೊಲೀಸಪ್ಪ ಸಂತ್ರಸ್ತೆ ಪತಿ ಬಳಿ ವಿಶ್ವಾಸದಿಂದ ಇದ್ದ. ಪತಿಯ ಸಹಕಾರ ಪಡೆದು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಚಂದ್ರನಾಯಕ್​ ಪದೇ ಪದೇ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತ ಸಂತ್ರಸ್ತೆ ಪತಿಗೆ ಸಂಪೂರ್ಣ ಬೆಂಬಲ ನೀಡಿ ಹಳೇ ಚಾಳಿ ಮುಂದುವರೆಸಲು ಕಾನ್ಸ್‌ಟೇಬಲ್​ ಸಹಕರಿಸಿದ್ದ. ಇದರಿಂದ ದಾರಿ ಕಾಣದೆ ಸಂತ್ರಸ್ತೆ ಪೊಲೀಸ್ ಆಯುಕ್ತ‌ ಸುಧೀರ್ ಕುಮಾರ್ ರೆಡ್ಡಿ ಮೊರೆ ಹೋಗಿದ್ದರು. ಇದೀಗ ಇಬ್ಬರ ಬಂಧನವಾಗಿದೆ.

Leave a Reply

Your email address will not be published. Required fields are marked *