Wed. Jul 16th, 2025

ಮಂಗಳೂರು: ವಿಶ್ವದ ಪ್ರತಿಷ್ಠಿತ “ರೋಲ್ಸ್ ರಾಯ್ಸ್ ” ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ “ರಿತುಪರ್ಣ” – ವಿವಿಧ ಮಹಿಳಾ ಪರ ಸಂಘಟನೆಗಳಿಂದ ಅಭಿನಂದನೆ

ಮಂಗಳೂರು:(ಜು.16) ವಿಶ್ವದ ಪ್ರತಿಷ್ಠಿತ “ರೋಲ್ಸ್ ರಾಯ್ಸ್ ” ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ “ರಿತುಪರ್ಣ” ರವರ ನಿವಾಸಕ್ಕೆ ವಿವಿಧ ಮಹಿಳಾ ಪರ ಸಂಘಟನೆಗಳು ಭೇಟಿ ನೀಡಿ, ಅಭಿನಂದಿಸಿ , ಗೌರವಿಸಿದರು.

ಇದನ್ನೂ ಓದಿ: ⭕ಪುತ್ತೂರು: ಲಾರಿ ಚಾಲಕನ ನಿರ್ಲಕ್ಷ್ಯ

ಕಿರಿಯ ವಯಸ್ಸಿನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆದ ರಿತುಪರ್ಣ ರವರ ಸಾಧನೆ ನಿಜಕ್ಕೂ ಶ್ಲಾಘನೀಯ . ಇವರ ಸಾಧನೆ ಇಂದಿನ ಪೀಳಿಗೆಗೂ ಮುಂದಿನ ತಲೆಮಾರಿಗೂ ಮಾದರಿಯಗಲಿ ಹಾಗೂ ಭವಿಷ್ಯದಲ್ಲಿ ರಿತುರವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಾಮರಸ್ಯ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ , ಮದರ್ ತೆರೆಸಾ ವಿಚಾರ ವೇಧಿಕೆಯ ಫ್ಲೇವಿ ಕ್ರಾಸ್ತಾ , ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಮಾರಿ ಅಪ್ಪಿ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಶಿಕಲಾ ಪದ್ಮನಾಭ , ಸೇವಾದಳದ ಜಿಲ್ಲಾಧ್ಯಕ್ಷ ಅನಿತಾ ಕೆಪಿಟಿ , ಮಹಿಳಾ ಹೋರಾಟಗಾರ್ತಿ ಮೀನಾ ಟೆಲ್ಲಿಸ್ , ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯೆ ಶೈಲ ನೀತಾ ಡಿಸೋಜ , ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳಾದ ವಿದ್ಯಾ ಶೆಣೈ , ಅರ್ಚನಾ ಆಚರ್ , ಸಾಮರಸ್ಯದ ಸದಸ್ಯರಾದ ನೀತ್ ಶರಣ್ , ರಾಜೇಶ್ ದೇವಾಡಿಗ , ಟಿಸಿ ಗಣೇಶ್ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *