ಬೆಂಗಳೂರು :(ಜು.16) ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ಹೈಕೋರ್ಟ್ ನೀಡಿದೆ. ಎರಡನೇ ಬಾರಿಯೂ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ, ಆದೇಶಿಸಿದೆ.

ಇದನ್ನೂ ಓದಿ: ⭕ಉಡುಪಿ: ಹೃದಯಾಘಾತಕ್ಕೆ ಬಾಲಕ ಬ#ಲಿ
ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಾದ ಚೇತನ್, ಮನಿಷ್, ಕೇಶವ, ಮಂಜುನಾಥ್ ಅವರು ಎರಡನೇ ಬಾರಿ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರಿದ್ದ, ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ

ಹಾಗೂ ನಾಲ್ಕು ತಿಂಗಳೊಳಗೆ ಟ್ರಯಲ್ ಕೋರ್ಟ್ ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಸಲು ಹಾಗೂ ಅಲ್ಲಿಯ ವರೆಗೆ ಯಾವುದೇ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಆದೇಶಿಸಿದೆ.ಅಕ್ಷಯ್ ಕಲ್ಲೇಗ ಪರ ವಿಶೇಷ ಅಭಿಯೋಜಕರಾಗಿ ಖ್ಯಾತ ನ್ಯಾಯವಾದಿಗಳಾದ ರಾಜಶೇಖರ್ ಹಿಲ್ಯಾರ್ ಸಮರ್ಥವಾಗಿ ವಾದ ಮಂಡಿಸಿದ್ದಾರೆ.


