ಉಜಿರೆ:(ಜು.18)ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಜು.11ರಂದು ನಡೆಯಿತು.

ಇದನ್ನೂ ಓದಿ: 🟣ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ
ಪತ್ರಕರ್ತೆ ರಶ್ಮಿ ಯಾದವ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಸಾಹಿತ್ಯವನ್ನು ಓದಿದಾಗ ಭಾಷಾ ಕೌಶಲ್ಯ ಬೆಳೆಯುತ್ತದೆ. ಜೀವನ ಹಲವು ಬಗೆಯಲ್ಲಿ ಅರ್ಥವಾಗುತ್ತದೆ. ಯಾಕೆಂದರೆ ಸಾಹಿತ್ಯದಲ್ಲಿ ಜೀವನದ ಅನೇಕ ಅನುಭವಗಳು ಇರುತ್ತವೆ. ಅನುಭವಗಳು ಜೀವನವನ್ನು ರೂಪಿಸುತ್ತವೆ ಎಂದರು.
“ಸಾಹಿತ್ಯದ ಓದು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಸಾಹಿತ್ಯವನ್ನು ಓದಲೇಬೇಕು. ನಮ್ಮ ಮಾಧ್ಯಮಗಳ ಚರಿತ್ರೆ ನೋಡಿದರೆ ಅಲ್ಲಿ ಸಾಹಿತ್ಯ ಓದಿದ ಮಹಾನ್ ಪತ್ರಕರ್ತರನ್ನು ಕಾಣಬಹುದು. ನಾವು ಯಾವುದೇ ವಿಷಯವನ್ನು ಬರೆಯುವಾಗ ಕವಿಗಳ ಪದ್ಯಗಳನ್ನು, ಹೇಳಿಕೆ, ವಿಚಾರಗಳನ್ನು ಉಲ್ಲೇಖಿಸಿದರೆ ಆ ಬರಹಕ್ಕೆ ಹೆಚ್ಚು ತೂಕ ಬರುತ್ತದೆ. ಓದುಗರ ಮನಸ್ಸನ್ನು ಸೆಳೆಯುತ್ತದೆ. ಆದ್ದರಿಂದ ಸಾಹಿತ್ಯವನ್ನು ಅಧ್ಯಯನ ಮಾಡುವುದು ಕೇವಲ ಬರವಣಿಗೆಗೆ ಅಷ್ಟೇ ಅಲ್ಲದೆ ಬದುಕಿಗೂ ಉಪಯುಕ್ತ” ಎಂದರು.

ಮಾಧ್ಯಮ ಬರವಣಿಗೆ ಸ್ವರೂಪ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಕಾರ್ಯಕ್ರಮ ಸಂಯೋಜಕ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಉಪಸ್ಥಿತರಿದ್ದರು.
ಐಚ್ಛಿಕ ಕನ್ನಡ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


