ಚಿಕ್ಕಮಗಳೂರು :(ಜು.19) ನೇಣು ಬಿಗಿದುಕೊಂಡು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ. ಕಾಂತರಾಜ್ (45) ಮೃತ ದುರ್ದೈವಿ.

ಇದನ್ನೂ ಓದಿ:🟢ಉಜಿರೆ : ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ನೆಟ್ ಬಾಲ್ ಆಟಗಾರ್ತಿಗೆ ರಾಷ್ಟ್ರ ಮಟ್ಟದಲ್ಲಿ ಕಂಚು
ಕಾಂತರಾಜ್ ಎಸ್ಪಿ ಕಚೇರಿಯಲ್ಲಿ ಕಂಪ್ಯೂಟರ್ ಸೆಕ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾಂತರಾಜ್ ಅಪಘಾತದಲ್ಲಿ ಬಲಗಾಲು ಕಳೆದುಕೊಂಡಿದ್ದರು. ಕೃತಕ ಕಾಲು ಜೋಡಣೆ ಮೂಲಕ ಕಾಂತರಾಜ್ ಕೆಲಸ ಮಾಡುತ್ತಿದ್ದರು. ಈ ಹಿಂದೆ ಎ.ಎನ್.ಎಫ್. ಹಾಗೂ ಕಳಸ ಠಾಣೆಯಲ್ಲಿ ಕಾಂತರಾಜ್ ಕರ್ತವ್ಯ ನಿರ್ವಹಿಸಿದ್ದರು. ಮನೆಯಲ್ಲಿ ಯಾರು ಇಲ್ಲದೆ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.



