ಮಂಗಳೂರು:(ಜು.೧೯) ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನೆಡೆಸುವ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಸೀಟು ಹಂಚಿಕೆ ಕುರಿತಾದ ಗೊಂದಲಗಳನ್ನು ತತಕ್ಷಣವೇ ನಿವಾರಿಸಿ, ಸೀಟು ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಿ ನಿರ್ದಿಷ್ಟ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯು ತನ್ನ ಸ್ವರೂಪ ಮತ್ತು ವಿವಿಧ ಅಂಶಗಳ ಸಂಯೋಜಿತ ಒಳಗೊಳ್ಳುವಿಕೆಯಿಂದ ದೇಶದಲ್ಲಿಯೇ ಅತ್ಯುತ್ತಮ ಅನುಕರಣೀಯ ವ್ಯವಸ್ಥೆ ಎಂದು ನಿರೂಪಿಸಲ್ಪಟ್ಟಿದೆ.

205-26ನೇ ಸಾಲಿನ ಸಾಮಾನ್ಯ ಪ್ರದೇಶಾತಿ ಪರೀಕ್ಷೆಯಲ್ಲಿನ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆ ತರುವ ನೆಪದಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿಸಿರುವುದು ಕಳವಳಕಾರಿಯಾದ ಸಂಗತಿ. ಈ ಬಾರಿಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮೊದಲ ಹಂತದಲ್ಲಿ ಇಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಹೊರತುಪಡಿಸಿ ಇನ್ನಿತರ ಯಾವುದೇ ಕೋರ್ಸ್ ಗಳ ಸರಿಯಾದ ಸೀಟ್ ಮ್ಯಾಟ್ರಿಕ್ಸ್ ಪ್ರಕಟಸದಿರುವುದು ಸೇರಿದಂತೆ KEA ರವರ ಸರ್ವರ್ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಅಪನ್ ಎಂಟ್ರಿ ಪ್ರಕ್ರಿಯೆಯನ್ನು ಸುಗಮವಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ಎರಡೆರಡು ಬಾರಿ ಶುಲ್ಕವನ್ನು ಪಾವತಿಸುವಂತೆ ಆಗಿರುವುದಷ್ಟೇ ಅಲ್ಲದೆ, ಸೀಟು ಬ್ಲಾಕಿಂಗ್ ದಂಧೆ ತಪ್ಪಿಸಲು ಮುಖ ಚಹರೆ ಗುರುತಿಸುವ ಅಂಶ ಸರ್ವರ್ ನಲ್ಲಿ ಪ್ರಾರಂಭದಲ್ಲಿ ನೀಡಲಾಗಿತ್ತು, ಅದನ್ನು ವ್ಯವಸ್ಥಿತವಾಗಿ ಉಪಯೋಗಿಸದೆ ತಾಂತ್ರಿಕ ಕಾರಣದ ನೆಪವೊಡ್ಡಿ ಕೈ ಬಿಡಲಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಹಾಗೂ ಒಟಿಪಿ ಮೂಲಕ ನೋಂದಾವಣಿಗೆ ಅವಕಾಶ ನೀಡಿದ್ದು, ಈ ಒಟಿಪಿ ಆಧಾರ್ ಆಧಾರಿತ ಒಟಿಪಿ ಆಗಿರುವುದಿಲ್ಲ, ಯಾವುದೇ ಮೊಬೈಲ್ ಸಂಖ್ಯೆಯನ್ನಾದರೂ ಬಳಸಿ ಒಟಿಪಿ ಯನ್ನು ಪಡೆದು ಕೊಳ್ಳಬಹುದಾಗಿದ್ದು, ಇದು ಹಲವಾರು ಗೊಂದಲಗಳಿಗೆ ಮತ್ತು ದುರ್ಬಳಕೆಗೆ ಅನುವು ಮಾಡಿಕೊಟ್ಟಿರುವುದು ಸತ್ಯ.

ಇದನ್ನ ಸೂಕ್ತ ತಂತ್ರಾಂಶದೊಂದಿಗೆ ಪಾರದರ್ಶಕರಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆಸಬಹುದಾದ ಕೌನ್ಸಲಿಂಗ್ ಪ್ರಕ್ರಿಯೆಗೂ ಶುಲ್ಕ ವಿಧಿಸಿರುವುದನ್ನು ಖಂಡನಿಯ. ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸುವ್ಯವಸ್ಥಿತ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ಎಂಬ ಹಗರರಿಂದಳಿಸಿಕೊಳ್ಳಲು, ಸೀಟು ಬ್ಲಾಕಿಂಗ್ ದಂಧೆಯನ್ನು ಬುಡದಮಟ್ಟದಿಂದ ಕಿತ್ತು ಹಾಕುವುದರೊಂದಿಗೆ, ಈಗಾಗಲೇ ಈ ಎಂಬುಹೆಗಳ ಯಾಗಿರುವ ಕಾಲೇಜುಗಳಿಗೆ ಕಾನೂನಿನ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಂದ ಅನ್ಯಾಯವಾಗಿ ವಸೂಲಿ ಮಾಡಲಾಗಿರುವ 750 ರೂ/- ಶುಲ್ಕವನ್ನು ಮರುಪಾವತಿಸಬೇಕೆಂದು ಆಗ್ರಹಪೂರ್ವಕವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಒತ್ತಾಯಿಸಿದರು.

