ಇದನ್ನೂ ಓದಿ: ⭕ಶಿಕ್ಷಕರ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು (ಜು.20): ಮಾತುಕತೆಗೆಂದು ಬಂದವನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಹೆಚ್ಎಎಲ್ನಲ್ಲಿ ನಡೆದಿದೆ. ಜುಲೈ 17ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸೆಲ್ವ ಕಾರ್ತಿಕ್ ಕೊಲೆ ಮಾಡಲು ಯತ್ನಿಸಿದ ಆರೋಪಿ. ತಮಿಳುನಾಡು ಮೂಲದ ಆರೋಪಿ ಸೆಲ್ವ ಕಾರ್ತಿಕ್ಗೆ ಕರ್ನಾಟಕದ ಓರ್ವ ವಿವಾಹಿತ ಮಹಿಳೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಳೆ. ಆರೋಪಿ ಸೆಲ್ವ ಕಾರ್ತಿಕ್ ಇನ್ಸ್ಟಾಗ್ರಾಂನಲ್ಲೇ ಮಹಿಳೆಗೆ ಮೆಸೇಜ್ ಮಾಡಿ ಪ್ರೀತಿಸು ಅಂತ ಪೀಡಿಸುತ್ತಿದ್ದನು.

ಈ ವಿಚಾರವನ್ನು ಮಹಿಳೆ ಗಂಡನಿಗೆ ಹೇಳದೆ ತನ್ನ ತಂದೆಗೆ ತಿಳಿಸಿದ್ದಾಳೆ. ಆಗ, ಮಹಿಳೆಯ ತಂದೆ ಮಾತುಕತೆಗೆಂದು ಹೆಚ್ಎಎಲ್ಗೆ ಕಾರ್ತಿಕ್ನನ್ನು ಕರೆಸಿಕೊಂಡಿದ್ದಾರೆ. ಹೆಚ್ಎಲ್ಗೆ ಬಂದ್ ಕಾರ್ತಿಕ್ನನ್ನು ಮಹಿಳೆಯ ತಮ್ಮ ಪ್ರಶಾಂತ್ನು ತನ್ನ ಬೈಕ್ನಲ್ಲಿ ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದನು. ಈ ವೇಳೆ, ಆರೋಪಿ ಕಾರ್ತಿಕ್ನು ಹಿಂದಿನಿಂದ ಪ್ರಶಾಂತ್ನ ಕತ್ತುಕೊಯ್ದ ಕೊಲೆ ಮಾಡಲು ಯತ್ನಿಸಿದ್ದಾನೆ. ಗಾಯಾಳು ಪ್ರಶಾಂತ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೆಲ್ವ ಕಾರ್ತಿಕ್ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.


